ಜಿಲ್ಲೆ

ಬಿಜೆಪಿಯಿಂದ ಮಹಿಳಾ ದಿನ ಆಚರಣೆ

ವಿನಯ ಹೆಗಡೆ

ಭಟ್ಕಳ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಗುರುವಾರ ಆಚರಿಸಲಾಯಿತು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಕಾರ್ಯಕ್ರಮ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಲಕ್ಮಿನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಪ್ರಕೋಸ್ಥ ಸಹ ಸಂಚಾಲಕ ಮೋಹನ ನಾಯ್ಕ, ಮಂಡಲ ಉಪಾಧ್ಯಕ್ಷೆ ಪಾರ್ವತಿ ನಾಯ್ಕ, ಖಜಾಂಚಿ ಪರಿಮಳ ಶೇಟ್ ಉಪಸ್ಥಿತರಿದ್ದರು. ತಾಲೂಕಾ ಮಹಿಳಾ ಅಧ್ಯಕ್ಷೆ ಸುನೀತಾ ಡಿ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಉಪಾಧ್ಯಕ್ಷೆ ಸವಿತಾ ಗೊಂಡ ಸ್ವಾಗತಿಸಿದರು. ಕುಪ್ಪು ಗೊಂಡ ವಂದಿಸಿದರು.

ಸಾಧಕಿಯರಾದ ನಾರಾಯಣಿ ನಾಯ್ಕ ಹಾಗೂ ಯಮುನಾ ದಿನೇಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.