ಜಿಲ್ಲೆ

ಮಹಿಳಾ ದಿನಾಚಾರಣೆಯ ಅಂಗವಾಗಿ ಮಹಿಳಾ ಸಾಧಕರಿಗೆ ಸನ್ಮಾನ

Gadag - Shivanand Hiremath

Gadag: ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ಮನೆಯ ಬೆಳಗುವ ದೀಪ, ಇಂದು ಹೆಣ್ಣು ನಾಲ್ಕು ಗೋಡೆಗೆ ಸೀಮಿತವಾಗಿರದೆ ತನ್ನöನ್ನು ತಾನು ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಅತ್ಯುತ್ತಮವಾದ ಕಾರ್ಯಗಳನ್ನು ಮಾಡುತ್ತಾ ತನ್ನದೇ ಛಾಪು ಮೂಡಿಸಿ ತಾನು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾಳೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸಿ ಇನ್ನರ್ ವ್ಹೀಲ್ ಕ್ಲಬ್ ಗದಗ ಬೆಟಗೇರಿಯು ಅವರಿಗೆ ಗೌರವ ಹಾಗೂ ಸನ್ಮಾನವನ್ನು ಸಲ್ಲಿಸಿ   ಮಹಿಳಾ ದಿನಾಚಾರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಸಾವಯವ ಕೃಷಿಯಲ್ಲಿ ನಿರತರಾದ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ “ಶ್ರೇಷ್ಠ ಕೃಷಿ ಮಹಿಳಾ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ “ಕೃಷಿ ಪಂಡಿತ” ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಮಂಗಳಾ ನೀಲಗುಂದ ಸದ್ಯ ಮುಳಗುಂದ ಗ್ರಾಮದಲ್ಲಿ ಕುರಿ ಸಾಗಾಣಿಕೆ ಹಾಗೂ ಸಾವಯವ ಕೃಷಿ ಜೊತೆಗೆ ಆಸಕ್ತರಿಗೆ ಸಾವಯವ ಕೃಷಿಯ ಮಾರ್ಗದರ್ಶನ ನೀಡುತ್ತಿದ್ದಾರೆ. ಹೆವಿ ಡ್ಯೂಟಿ ಲೈಸನ್ಸ ಹೊಂದಿದ ಶ್ರೀಮತಿ. ಶೋಭಾ ತೋಟದ, ಪತಿಯನ್ನು ಕಳೆದು ಕೊಂಡು ದೃತಿಗೆಡದೆ ಪತಿಯ ಆಟೋವನ್ನೆ ಓಡಿಸಿ ಬೇರೆ ಮಹಿಳೆಯರಿಗೆ ಮಾರ್ಗದರ್ಶಕರಾದ ಶ್ರೀಮತಿ ರೇಖಾ ಹುಲ್ಲೂರ ಹಾಗೂ ಅಂಗ ವಿಕಲ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮನ್ನು ಮುಡುಪಾಗಿಸಿ ಮಾರ್ಗದರ್ಶಕರು ಹಾಗೂ ಸಂಪನ್ಮೂಲ ವ್ಯಕ್ಯಿಗಳಾದ ಶ್ರೀಮತಿ ಕವಿತಾ ದಂಡಿನ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಇಂತಹ ಎಲ್ಲ ಸಾಧಕರಿಗೆ ಸಂಸ್ಥೆಯವತಿಯಿAದ ಸನ್ಮಾನ ಮಾಡಿ ಸಂಸ್ಥೆಯು ಅಂತರಾಷ್ಟಿçÃಯ ಮಹಿಳಾ ದಿನಾಚಾರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದೆಯಿಂದು ಮುಖ್ಯಅತಿಥಿಗಳಾದ ಶ್ರೀಮತಿ ಶಾಂತಾ ಗೌಡರರವರು ವೇದಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎಲ್ಲ ಸಾಧಕ ಮಹಿಳೆಯರನ್ನು ಶ್ರೀಮತಿ ಶಿವಲೀಲಾ ಅಕ್ಕಿ, ಶ್ರೀಮತಿ ಜಯಶ್ರೀ ಪಾಟೀಲ, ಶ್ರೀಮತಿ ಜಯಶ್ರೀ ಉಗಲಾಟ ವೇದಿಕೆಗೆ ಪರಿಚಯಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನಾಗರತ್ನಾ ಮಾರನಬಸರಿಯವರು ಈ ವರ್ಷದ ಧ್ಯೇಯ ವಾಕ್ಯದಂತೆ ಮಹಿಳೆರು ಮತ್ತು ಹೆಣ್ಣುಮಕ್ಕಳ ಹಕ್ಕುಗಳ ಸಮಾನತೆ ಮತ್ತು ಸಬಲೀಕರಣವನ್ನು ಆಧರಿಸಿದೆ. ಜನರು ಸರ್ಕಾರಗಳು ಮತ್ತು ಸಂಸ್ಥೆಗಳು ಇಂತಹ ಮಹಿಳೆಯರನ್ನು ಗುರುತಿಸುವ ಕಾರ್ಯ ಮಾಡಬೇಕೆಂದರು. ಇನ್ನರ್ ವ್ಹೀಲ್ ಸಂಸ್ಥೆಯ ಎಲ್ಲ ಸದಸ್ಯರು ಚುಟುಕು, ಹಾಸ್ಯ, ರೂಪಕ ಸಂವಾದ ನೃತ್ಯದಲ್ಲಿ ಭಾಗವಹಿಸಿ ಉತ್ಸಾಹದಿಂದ ಮಹಿಳಾ ದಿನಾಚಾರಣೆಯನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಆಶಾ ಪಟ್ಟಣಶೆಟ್ಟಿಯವರು ಇನ್ನರ್ ವ್ಹೀಲ್ ಪ್ರಾರ್ಥನೆಗೈದರು. ಸಹ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ದಾನಪ್ಪಗೌಡರ ಕಾರ್ಯಕ್ರಮ ನಿರೂಪಿಸದರು ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿರ್ಲಾಪೂರ ವಂದನಾರ್ಪಣೆಗೈದರು. ಐಎಸ್‌ಓ ಶ್ರೀಮತಿ ಪುಷ್ಪಾ ಭಂಡಾರಿ, ಸಿಎಲ್‌ಸಿಸಿ ಶ್ರೀಮತಿ ಸುಮಾ ಪಾಟೀಲ, ಶ್ರೀಮತಿ ಅನ್ನಪೂರ್ಣ ವರವಿ, ಶ್ರೀಮತಿ ಶಾಂತಾ ಮುಂದಿನಮನಿ, ಶ್ರೀಮತಿ ಆಶಾ ಹುಕ್ಕೇರಿ, ಶ್ರೀಮತಿ ನೀಲಾಂಬಿಕಾ ಉಗಲಾಟದ, ಶ್ರೀಮತಿ ಕಸ್ತೂರಿ ಹಿರೇಗೌಡರ, ಶ್ರೀಮತಿ ವಿಜಯ¯ಕ್ಷಿö್ಮ ಮಾನ್ವಿ, ಶ್ರೀಮತಿ ಪ್ರೇಮಾ ಮೇಟಿ, ಶ್ರೀಮತಿ ಸುವರ್ಣ ವಸ್ತçದ, ಶ್ರೀಮತಿ ಸುಶಿಲಾ ಕೋಟಿ, ಶ್ರೀಮತಿ ಸುಶಿಲಾ ಬಾಗಮಾರ ಮುಂತಾದವರು ಉಪಸ್ಥಿತರಿದ್ದರು.