ಜಿಲ್ಲೆ

ಪೆರ್ಮುದೆ ಇಗರ್ಜಿಯಲ್ಲಿ ಆಚರಣೆ

ಸೌಮ್ಯ ಆರ್

ಕಾಸರಗೋಡು: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿಯರ್ ಇಗರ್ಜಿಯಲ್ಲಿ ಭಾರತೀಯ ಕೆಥೋಲಿಕ ಯುವ ಸಂಚಲನ ಪೆರ್ಮುದೆ ಘಟಕ, ಕೆಥೋಲಿಕ ಸಭಾ ಘಟಕ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಧರ್ಮಗುರು ಆಲ್ವಿನ್ ಡಿಸೋಜ ಕೌಟುಂಬಿಕ ಜೀವನದ ಬಗ್ಗೆ ಮಾಹಿತಿ ನೀಡಿದರು. ಬದಿಯಡ್ಕ ದಂತ ವೈದ್ಯೆ ಡಾ.ಶರಲ್ ಮಾಡ್ತಾ ಬಾಯಿ, ಹಲ್ಲಿನ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಹೆಣ್ಮಕ್ಕಳು, ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಅನಿತಾ ಮೊಂತೆರೋ, ಲಿಲ್ಲಿ ಡಿಸೋಜ, ಲವೀನ ಕ್ರಾಸ್ತ ಮಹಿಳೆಯ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡರು. ವೈಎಂಸಿಎ ಪೆರ್ಮುದೆ ಘಟಕ ವತಿಯಿಂದ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಯಿತು. ಇಗರ್ಜಿಯ ಧರ್ಮಗುರು ಹೆರಾಲ್ಡ್ ಡಿಸೋಜ ವಿಜೇತರಿಗೆ ಬಹುಮಾನ ವಿತರಿಸಿದರು. ಇಗರ್ಜಿ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೇರಾ, ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ಸವಿತಾ ಮೊಂತೆರೋ ಸ್ವಾಗತಿಸಿದರು. ಲವೀನ ನೊರಿನ್ ಕಾರ್ಯಕ್ರಮ ನಿರೂಪಿಸಿದರು. ಫ್ಲಾವಿಯಾ ಮೊಂತೆರೋ ವಂದಿಸಿದರು.