ಮಡಿಕೇರಿ:
ಒಬ್ಬ ಮಹಿಳೆ ವಿದ್ಯಾವಂತೆ ಅದರೆ ಆಕೆಯ ಮನೆಯಲ್ಲೇ ಆರೋಗ್ಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ತಜ್ಞೆ ಹುಟ್ಟಿಕೊಳ್ಳುತ್ತಾರೆ ಎಂದು ಸಾಹಿತಿ ಕೃಪಾ ದೇವರಾಜ್ ಅಭಿಪ್ರಾಯಪಟ್ಟರು. ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ನೆಹರು ಯುವ ಕೇಂದ್ರ ಆಶ್ರಯದಲ್ಲಿ ಶನಿವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾನತೆಯ ಪ್ರತಿಪಾದನೆಗಾಗಿ ಅಂತಾರಾಷ್ಟಿçÃಯ ಮಹಿಳಾ ದಿನ ಆಚರಿಸಲಾಗುತ್ತಿದೆ. ಇದಕ್ಕೂ ಮೊದಲು ಮೊದಲ ಮಹಿಳಾ ರಾಜ್ಯಪಾಲರಾದ ಸರೋಜಿನಿ ನಾಯ್ಡು ಜನ್ಮ ದಿನವಾದ ಫೆ.13ಕ್ಕೆ ಭಾರತದಲ್ಲಿ ಮಹಿಳಾ ದಿನ ಆಚರಿಸಲಾಗುತ್ತಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನ ಇದೆ. ಮಹಿಳೆಯರು ಮೊದಲಿನಿಂದಲೂ ಬುದ್ಧಿವಂತರು. ಖಡ್ಗ ಹಿಡಿದು ಹೋರಾಡಿದ ಮಹಿಳೆಯರನ್ನೂ ಇತಿಹಾಸದಲ್ಲಿ ಗಮನಿಸಬಹುದು. ಇಂದಿನ ಮಹಿಳೆಯರು ಸ್ವಯಂ ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡಬೇಕು.
ಸುತ್ತಲಿನ ವಾತಾವರಣ ಎಷ್ಟೇ ಸುರಕ್ಷಿತ ಅನ್ನಿಸಿದರೂ ಸಮಯ, ಸಂದರ್ಭ, ಸ್ಥಳ ಹೇಗಿರುತ್ತದೆ ಎನ್ನಲಾಗುವುದಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಅಗತ್ಯ. ಜೀವನದಲ್ಲಿ ಕೆಟ್ಟ ಅನುಭವ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ. ಹೆಣ್ಣು ಮಕ್ಕಳು ಸಮಾಜದಲ್ಲಿ ಹೇಗೆ ಇರಬೇಕು ಎಂದು ಪೋಷಕರು ಬುದ್ಧಿ ಮಾತು ಹೇಳುವುದು ಸಾಮಾನ್ಯ. ಇದರಂತೆ ಪ್ರತಿ ಮನೆಗಳಲ್ಲೂ ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಈ ಮೂಲಕ ಹೆಣ್ಣಿನ ಘನತೆ ಎತ್ತರದಲ್ಲಿ ಇರುವಂತ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆಯೇ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲೆ ಡಾ. ಕೋರನ ಸರಸ್ವತಿ ಮಾತನಾಡಿ, ಮಹಿಳಾ ದಿನಾಚರಣೆ ಎಂದರೆ ಇದೊಂದು ಬರೀ ಸಂಭ್ರಮ ಎಂದು ಭಾವಿಸದೇ ಪ್ರಗತಿ, ಸಮೃದ್ಧಿಯ ಇನ್ನೊಂದು ಮುಖ ಎಂದು ಪರಿಗಣಿಸಬೇಕು. ಹೆಣ್ಣಿಗೆ ಸ್ವಾತಂತ್ರö್ಯದ ಅಗತ್ಯ ಇಲ್ಲ ಎಂದು ಮನು ಸ್ಮೃತಿಯಲ್ಲಿ ಹೇಳಲಾಗಿತ್ತು. ಬಾಲ್ಯದಲ್ಲಿ ತಂದೆ, ಯವ್ವನದಲ್ಲಿ ಪತಿ, ವೃದ್ದಾಪ್ಯದಲ್ಲಿ ಮಗನ ಆಸರೆಯಲ್ಲಿ ಮಹಿಳೆ ಇರುವುದರಿಂದ ಬಹುಶಃ ಹೀಗೆ ಹೇಳಿರಬಹುದು. ಮಹಿಳೆಯರ ಸಾಹಿತ್ಯ ಕೃಷಿಯನ್ನು ಮೊದಲೆಲ್ಲಾ ಅಡುಗೆಮನೆ ಸಾಹಿತ್ಯ ಎನ್ನಲಾಗುತ್ತಿತ್ತು. ಆದರೆ ಆ ಕಾಲ ಈಗ ಇಲ್ಲ. ಪ್ರಸ್ತುತ ದಿನದಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ವ್ಯಾಪಿಸಿದ್ದಾಳೆ. ಸಮಾಜದಲ್ಲಿ ಎಲ್ಲಾ ಪಾತ್ರಗಳನ್ನು ಸ್ತಿçà ಯಶಸ್ವಿಯಾಗಿ ನಿಭಾಯಿಸುತ್ತಿದ್ದಾಳೆ ಎಂದರು.
ಮಡಿಕೇರಿ ನೆಹರು ಯುವ ಕೇಂದ್ರದ ರಾಷ್ಟಿçÃಯ ಯುವ ಕಾರ್ಯಕರ್ತೆ ಜಿ.ಪಿ. ರಂಜಿತಾ, ಉಪನ್ಯಾಸಕರಾದ ನಮಿತಾ, ನಿರ್ಮಲಾ, ಗ್ರಂಥಪಾಲಕಿ ಜ್ಯೋತಿ, ಕಚೇರಿ ಸಹಾಯಕಿ ಕವಿತಾ ಇದ್ದರು. ಸ್ವಾತಿ ಮತ್ತು ತಂಡದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಿಯಾ ಸ್ವಾಗತಿಸಿ, ಶ್ರಾವ್ಯ ವಂದನಾರ್ಪಣೆ ಮಾಡಿದರು. ಸಿಂಚನಾ ಅತಿಥಿಗಳನ್ನು ಪರಿಚಯಿಸಿದರು.