ಮಡಿಕೇರಿ: ಮಹಿಳೆಯರು ಬ್ಯಾಟ್ ಹಿಡಿದು ತಮ್ಮ ಕೌಟುಂಬಿಕ ಜಂಜಾಟಗಳನ್ನೆಲ್ಲ ಮರೆತು ಸಿಕ್ಸ್-ಫೋರ್ ಬಾರಿಸುತಾ ತಾವೂ ಸಂಭ್ರಮಿಸುತಾ ಪ್ರೇಕ್ಷಕರಿಗೂ ಮುದನೀಡಿದ ಮಹಿಳಾ ಕ್ರಿಕೇಟ್ ಕ್ರೀಡೆ ಆಕರ್ಷಣೀಯವಾಗಿತ್ತು. ವಿವಿಧ ಉಡುಪುಧರಿಸಿದ ಮಹಿಳಾ ಚೀರ್ ಉಮೆನ್ಸ್ ತಂಡದ ನ್ರತ್ಯ ಕಾರ್ಯಕ್ರಮಕ್ಕೆ ಮೆರಗುನೀಡಿತ್ತು.
ಮಹಿಳೆಯರು ತಯಾರಿಸಿದ ವಿವಿಧ ಬಗ್ಗೆ ತಿಂಡಿತಿನಿಸುಗಳ ಮಳಿಗೆಗಳು ಹಲವು ಬಗೆಯ ಕ್ರೀಡೆಗಳು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು. ಕೊಡಗಿನ ನಾನಾ ಕಡೆಗಳಿಂದ ಮಹಿಳೆಯರಲ್ಲದೆ ಪುರುಷರು ಮಕ್ಕಳು ಹೆಚ್ಚಾಗಿಭಾಗವಹಿಸಿದ್ದು ವಿಶೇಷವಾಗಿತ್ತು.
ಚೆಟ್ಟಳ್ಳಿ ಕ್ಲಬ್ ವತಿಯಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ ಉಮೆನ್ಸ್ ನಾಕ್‌ಔಟ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚಿರ ಎ.ಅಯ್ಯಪ್ಪ ಕಾರ್ಯಕ್ರಮವನ್ನು ಉದ್ಗಾಟಿಸಿ, ಕ್ರೀಡೆಗಳು ಮಾನಸಿಕ ಹಾಗು ದೈಹಿಕ ಸದೃಢತೆಗೆ ಸಹಕಾರಿಯಾಗಲಿದೆ. ಕೊಡಗಿನಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆ ಗಮನಾರ್ಹವಾಗಿದೆ. ಮಹಿಳಾ ಕ್ಲಬ್ ವತಿಯಿಂದ ಚೆಟ್ಟಳ್ಳಿಯಲ್ಲಿ ಮಹಿಳಾ ಕ್ರಿಕೇಟ್ ಆಯೋಜಿಸಿರುವುದು ಪ್ರಶಂಸನೀಯವೆಂದರು.
ಕ್ರೀಡಾಜ್ಯೋತಿಯನ್ನು ಬೆಳಗಿಸಿ ಕ್ರಿಕೇಟ್ ಆಡುವ ಮೂಲಕ ಕ್ಯಾಪ್ಟನ್ ಮಲ್ಚಿರ ಎ.ಅಯ್ಯಪ್ಪ ಕ್ರಿಕೇಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ೧೬ ತಂಡಗಳು ೩ ಓವರ್‌ನ ಪಂದ್ಯದಲ್ಲಿ ಪ್ರಶಸಸ್ತಿಗಾಗಿ ಸೆಣಸಾಟ ನಡೆಸಿತು. ಅಂತಿಮವಾಗಿ ೪ ಓವರ್‌ನ ಫೈನಲ್ ಪಂದ್ಯದಲ್ಲಿ ಆದರ್ಶ್‌ಯೂತ್ ಕ್ಲಬ್ ಕಟ್ಟೆಮಾಡು ೪೨ ರನ್ ಪಡೆಯುವ ಮೂಲಕ ಅವರ್ ಕ್ಲಬ್ ಚೆಟ್ಟಳ್ಳಿಯನ್ನು ಮಣಿಸಿದರು. ಸಂಭ್ರಮಾ ಕ್ಲಬ್ ಟಿ.ಶೆಟ್ಟಿಗೇರಿ ತಂಡ ಮೂರನೇ ಸ್ಥಾನವನ್ನು ತಮ್ಮದಾಗಿಸಿ ಕೊಂಡಿತು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಚೆಟ್ಟಳ್ಳಿ ಪ್ರೌಢಶಾಲೆಯ ಸಂಚಾಲಕ ಮುಳ್ಳಂಡ ರತ್ತುಚಂಗಪ್ಪ ಮಾತನಾಡಿ, ಚೆಟ್ಟಳ್ಳಿಯಲ್ಲಿ ಪ್ರಪಥಮ ಮಹಿಳಾಕ್ರೀಡೆಯನ್ನು ಆಯೋಜಿಸಿರುವುದು ಹೆಮ್ಮೆ ಎನಿಸಿದೆ ಎಂದ ಅವರು, ವಿಜೇತ ತಂಡಕ್ಕೆ ಶುಭಹಾರೈಸಿದರು.
ಪ್ರಥಮ ಸ್ಥಾನ ಪಡೆದ ಆದರ್ಶ್‌ಯೂತ್ ಕಟ್ಟೆಮಾಡುತವರಿಗೆ ಟ್ರೋಫಿ ಹಾಗು ೧೧ ಸಾವಿರ ನಗದು ಬಹುಮಾನ ಪಡೆದರೆ, ದ್ವಿತೀಯ ಸ್ಥಾನ ಪಡೆದ ಅವರ್ ಕ್ಲಬ್ ಚೆಟ್ಟಳ್ಳಿಯವರಿಗೆ ಟ್ರೋಫಿ ಹಾಗು ೬ಸಾವಿರ ನಗದು ಹಾಗು ತೃತೀಯ ಸ್ಥಾನ ಪಡೆದ ಸಂಭ್ರಮಾ ಕ್ಲಬ್ ಟಿಶೆಟ್ಟಿಗೇರಿ ತಂಡಕ್ಕೆ ೩ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ಆಲ್‌ರೌಂಡರಾಗಿ ಮಿಂಚಿದ ಮನೆಮಂಡ ಅಂಜಲಿಸೋಮಯ್ಯ, ಅತ್ಯುತ್ತಮ ಆಟಗಾರರಾದ ಮುಳ್ಳಂಡ ವಿಂದ್ಯಾರಂಜನ್, ಜ್ಯೋತಿ, ಅಶ್ವಿನಿ,ವಿನೂತ, ಕೆಚೆಟ್ಟಿರ ರತಿ ಕಾರ್ಯಪ್ಪ, ಸಜಾಪೂವಯ್ಯ ಹಾಗು ಹಲವರಿಗೆ ಬಹುಮಾನ ನೀಡಲಾಯಿತು. ಮಡಿಕೇರಿಯ ಪೊಮ್ಮಕ್ಕಡ ಕೂಟಕ್ಕೆ ಅತ್ಯುತ್ತಮ ಚೀಯ್ಸ ತಂಡ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅವರ್ ಕ್ಲಬ್‌ನ ಅಧ್ಯಕ್ಷೆ ಐಚೆಟ್ಟಿರ ಸುಮಿತಾ ಮಾಚಯ್ಯ, ಉಪಾಧ್ಯಕ್ಷೆ ಮುಳ್ಳಂಡ ಶೋಭಾಚಂಗಪ್ಪ, ಮಾಜಿ ಅಧ್ಯಕ್ಷೆ ಕೊಂಗೇಟಿರ ದೇಚುಮುದ್ದಯ್ಯ, ಕಾರ್ಯದರ್ಶಿ ಅಂಜಲಿಸೋಮಯ್ಯ, ಖಜಾಂಜಿ ಮುಳ್ಳಂಡ ಸುಶೀಲಾ ತಮ್ಮಯ್ಯ ವೇದಿಕೆಯಲ್ಲಿದ್ದರು. ಕ್ಲಬ್‌ನ ಪದಾಧಿಕಾರಿಗಳು ಹಾಗು ಸದಸ್ಯರು ಕ್ರೀಡಾ ಆಯೋಜನೆಯಲ್ಲಿ ಶ್ರಮಿಸಿದರು.