ಜಿಲ್ಲೆ

ಮನೆಯಂಗಳದಲ್ಲಿ ಮಹಿಳಾ ಜಾಗೃತಿ

ಉಳ್ಳಾಲ: ಕುರ್ನಾಡು ಗ್ರಾ.ಪಂ. ವ್ಯಾಪ್ತಿಯ ಸುಬ್ಬಗುಳಿಯ ಜರೀನಾ ಬಾನು ಅವರ ಮನೆಯಂಗಳದಲ್ಲಿ ಮಹಿಳಾ ಸಬಲೀಕರಣ, ಶೂನ್ಯ ಕಸ ನಿರ್ವಹಣೆ, ಸುಸ್ಥಿರ ಸ್ವಚ್ಛತೆ, ಸ್ವ-ಉದ್ಯೋಗ ವಾಹಿತಿ ಪ್ರೇರಣೆ ತರಬೇತಿ ನಡೆಯಿತು.

ಜನಶಿಕ್ಷಣ ಟ್ರಸ್ಟ್ ಮತ್ತು ಕುರ್ನಾಡು ಗ್ರಾ.ಪಂ. ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಔಷಧೀಯ ಸಸಿ ಸಿಮರೋಬ ಮತ್ತು ಮಲ್ಲಿಗೆ ಗಿಡಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ನರೇಗಾದ ವಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಚಾಲನೆ ನೀಡಿದರು.

ಶೂನ್ಯಕಸ ನಿರ್ವಹಣೆ ಮೂಲಕ ಸುಸ್ಥಿರ ಸ್ವಚ್ಛತೆ ಸಾಧಿಸಿ ಮನೆಯಲ್ಲೇ ದಿನ ಬಳಕೆ ವಸ್ತುಗಳನ್ನು ತಯಾರಿಸಿ ಮನೆಯಂಗಳದಲ್ಲಿ ಮಲ್ಲಿಗೆ ತೋಟ ಬೆಳೆಸಿ ಸುಸ್ಥಿರ ಸ್ವಾವಲಂಬಿ ಜೀವನೋಪಾಯ ಕಂಡುಕೊಳ್ಳುವ ಸುಲಭ, ಸರಳ ವಾರ್ಗೋಪಾಯಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಾಹಿತಿ ನೀಡಿ ಸಂವಾದ ನಡೆಸಿದರು.

ಗ್ರಾ.ಪಂ. ಉಪಾಧ್ಯಕ್ಷ ಅಶ್ರಫ್, ಆಶಾ ಕಾರ್ಯಕರ್ತೆ ಯಶೋದಾ, ಗ್ರಾಮ ಪುನರ್ವಸತಿ ಕಾರ್ಯಕರ್ತ ರಮೀಜ್, ಸಂಪನ್ಮೂಲ ವ್ಯಕ್ತಿ ಮುವ್ತಾಜ್, ಹಿರಿಯರಾದ ಸುಂದರ ದೇವಾಡಿಗ, ಅವ್ವಮ್ಮ, ಅಮಿನಮ್ಮ ಮೊದಲಾದವರು ಸಂವಾದದಲ್ಲಿ ಭಾಗವಹಿಸಿ ಅನುಭವ್ನ ಹಂಚಿಕೊಂಡರು. ರುಕಿಯ ಮತ್ತು ಅಸ್ಮಾ ಉಪಸ್ಥಿತರಿದ್ದರು.