ಜಿಲ್ಲೆ

ಸ್ತ್ರೀಯರು ಕಾನೂನಿನ ಸದುಪಯೋಗ ಪಡೆದುಕೊಳ್ಳಲಿ

ಲಕ್ಷೆ್ಮೕಶ್ವರ: ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ವೇದ ಕಾಲದಿಂದಲೂ ಮಹಿಳೆಯರಿಗೆ ಗೌರವದ ಸ್ಥಾನಮಾನ, ಪೂಜ್ಯನೀಯ ಭಾವನೆಯಿಂದ ಕಾಣುತ್ತ ಬರಲಾಗಿದೆ. ಕಾನೂನಾತ್ಮಕವಾಗಿಯೂ ಮಹಿಳೆಯರಿಗೆ ವಿಶೇಷ ಗೌರವ-ಸ್ಥಾನಮಾನ, ಹಕ್ಕುಗಳಿವೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತ ಯೋಗೀಶ ಕರಗುದರಿ ಹೇಳಿದರು.

ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ 10ನೇ ವಾರ್ಷಿಕೋತ್ಸವ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ರಕ್ಷಣೆಗೆ ಸರ್ಕಾರ ಅನೇಕ ಕಾನೂನು ರಚನೆ ಮಾಡಿದ್ದು, ನಮ್ಮ ಹೆಣ್ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ದಿವಾಣಿ ನ್ಯಾಯಾಧೀಶರಾದ ಸತೀಶ ಎಂ., ತಹಸೀಲ್ದಾರ್ ವಾಸುದೇವ ವಿ. ಸ್ವಾಮಿ ಮಾತನಾಡಿದರು. ಹೆಣ್ಣುಮಕ್ಕಳ ಜನ್ಮದಿನಾಚರಣೆ, ಅನ್ನ ಪ್ರಾಸನ ಕಾರ್ಯಕ್ರಮ ಹಾಗೂ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವನ್ನು ಸಿಡಿಪಿಒ ಮೃತ್ಯುಂಜಯ ಗುಡ್ಡದನ್ವೇರಿ ಕಾರ್ಯಕ್ರಮ ನಿರ್ವಹಿಸಿದರು.

ಸಹಾಯಕ ಅಭಿಯೋಜಕಿ ಹೀನಾಕೌಸರ ಗಂಜಿಹಾಳ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ, ವಕೀಲರಾದ ಎನ್.ಐ. ಬೆಲ್ಲದ, ರಾಜ್ಯ ಪ್ರಶಸ್ತಿ ಪುರಸೃ್ಕೆ ಸಾಹಿತಿ ಲಲಿತಕ್ಕ ಕೆರಿಮನಿ, ಸಿಡಿಪಿಒ ಅನ್ನಪೂರ್ಣ ಹಳ್ಳಿಗುಡಿ, ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ, ಗಿರಿಜಾ ಪಾಟೀಲ, ಪೋಷಣ ಮಾಸಾಶನಾ ಸಂಯೋಜಕ ಆನಂದ ಕೊಡ್ಲಿ ಸೇರಿ ಶಿರಹಟ್ಟಿ ಮತ್ತು ಲಕ್ಷೆ್ಮೕಶ್ವರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಇತರರಿದ್ದರು.