ಜಿಲ್ಲೆ

ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು

ಬೈಲಹೊಂಗಲ: ಮಹಿಳೆಯರು ಗೃಹಲಕ್ಷಿ$್ಮ ಹಣವನ್ನು ವ್ಯರ್ಥ ಮಾಡದೆ ಸಣ್ಣ ಪ್ರಮಾಣದಲ್ಲಿ ವಿನಿಯೋಗಿಸಿ ಮನೆಯಲ್ಲೇ ಉತ್ತಮ ಮತ್ತು ಪರಿಶುದ್ಧ ಆಹಾರೋತ್ಪನ್ನಗಳನ್ನು ಉತ್ಪಾದಿಸಿ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಸಲಹೆ ನೀಡಿದರು.

ತಾಲೂಕಿನ ದೊಡವಾಡ ಗ್ರಾಮದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟ, ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗ್ರಾಮಮಟ್ಟದ ಸಂಜೀವಿನಿ ಮಾಸಿಕ ಸಂತೆ ಉದ್ಘಾಟಿಸಿ ಮಾತನಾಡಿದರು.

ಎನ್​ಆರ್​ಎಲ್​ಎಂ ಯೋಜನೆ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ಸದ್ಬಳಕೆ ಬಗ್ಗೆ ಮಹಿಳೆಯರು ಮಾಹಿತಿ ಪಡೆಯಬೇಕು ಎಂದರು.

ತಾಪಂ ಇಒ ಸಂಜೀವ ಜುನ್ನೂರ ಮಾತನಾಡಿ, ಸ್ವಸಹಾಯ ಸಂಗಳ ಸದಸ್ಯರು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ಮಾಸಿಕ ಸಂತೆ ಕಾರ್ಯಕ್ರಮ ಬಹಳ ಉಪಯುಕ್ತ ಎಂದರು. ಸಂಜೀವಿನಿ ಯೋಜನೆ ಡಿಆರ್​ಸಿ ಬಸಮ್ಮ ಸಂಬರಗಿ ಮಾತನಾಡಿದರು.

ಇದೇ ವೇಳೆ ಶಾಸಕರು ಮಾಸಿಕ ಸಂತೆಯಲ್ಲಿ ಕೆಲ ಸಾವಯವ ಉತ್ಪನ್ನಗಳನ್ನು ಖರೀದಿಸಿದರು. ಗ್ರಾಪಂ ಉಪಾಧ್ಯೆ ಶೋಭಾ ಮಡಿವಾಳರ, ಪ್ರಮುಖರಾದ ಮಲ್ಲಪ್ಪ ಯರಿಕಿತ್ತೂರ, ಸೋಮನಿಂಗ ಚೌಡಣ್ಣವರ, ಬಾಳಪ್ಪ ಅಲಸಂದಿ, ಬಸಪ್ಪ ಕಡದೊಳ್ಳಿ ಇತರರಿದ್ದರು.