ಬಾಗಲಕೋಟೆ: ಮಹಿಳೆಯರು ಸ್ವಾವಲಂಬಿಗಳಾದಾಗ ಕುಟುಂಬ, ಸಮಾಜಕ್ಕೆ ಆರ್ಥಿಕ ಶಕ್ತಿ ಹೆಚ್ಚುತ್ತದೆ. ಮಕ್ಕಳ ಶಿಕ್ಷಣಕ್ಕೂ ವಿಶೇಷವಾಗಿ ಅವಕಾಶ ಸಿಗುತ್ತದೆ ಎಂದು ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ನಗರದ ಬಸವೇಶ್ವರ ಬ್ಯಾಂಕ್ ಸಭಾಭವನದಲ್ಲಿ ಸಿರಿ ಸಾಂಸ್ಕೃತಿಕ ಸಂಸ್ಥೆ ಜಿಲ್ಲಾ ವನಿತಾ ಲೋಕ, ವನಸಿರಿ ಸರ್ವಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024 ನೇ ಪ್ರಸ್ತಕ ಸಾಲಿನ ವಿವಿಧ ಕೌಶಲ ಅಭಿವೃದ್ಧಿ ತರಬೇತಿಗಳ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 7 ವರ್ಷಗಳಿಂದ ಮಹಿಳೆಯ ಸ್ವಾವಲಂಭಿ ಉದ್ಯೋಗಕ್ಕಾಗಿ ಇಂತಹ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದೆ. ಸಾವಿರಾರು ಜನ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಇಂದು ಯಶಸ್ವಿ ಉದ್ದಿಮೆ ನಡೆಸುತ್ತಿರುವದು ನಮ್ಮ ಬ್ಯಾಂಕಿನ ಹೆಮ್ಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎಂದರು.
ಮೈಂಡ್ ಪವರ್ ಸ್ಪೋಕನ್ ಇಂಗ್ಲೀಷ್ ತರಬೇತುದಾರ ಅಶೋಕ ಕೆಂಪಲಿಂಗಣ್ಣವರ, ಸಿರಿ ಸಂಸ್ಥೆಯ ಶಿಲ್ಪಾ ಯರಾಸಿ, ವನಿತಾ ಲೋಕದ ಜಯಮ್ಮ ಅಬ್ದುಲಪುರ, ಬ್ಯಾಂಕಿನ ನಿರ್ದೇಶಕ ಶ್ರೀನಿವಾಸ ಬಳ್ಳಾರಿ, ಉಷಾ ಜಿಗಜಿನ್ನಿ, ವಿ.ವಿ.ಶಿರಗಣ್ಣವರ, ವಿ.ಸಿ.ಕೇಮಾಳಿ, ಎಸ್.ಬಿ.ಬದಾಮಿ, ರಜನಿ ಶೆಟ್ಟರ, ಸರೋಜಾ ಕುರ್ತಕೋಟಿ, ಜ್ಯೋತಿ ನಾವಲಗಿ, ವಿಜಯಲಕ್ಷ್ಮೀ ದಿಟ್ಟಬಾಗಲು, ರಾಜೇಶ್ವರಿ ಬೋನಗೇರಿ, ವಿಜು ಪವಾರ ಉಪಸ್ಥಿತರಿದ್ದರು. ಅಯೋಧ್ಯೆಯಲ್ಲಿ ಸಾಂಸ್ಕೃತಿಕ ನೃತ್ಯ ವೈಭವ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ನಾಟ್ಯ ಮಯೂರಿ ಕಲಾನಿಕೇತನ ತಂಡದ ಅಧ್ಯಕ್ಷೆ ನೃತ್ಯ ಶಾರದೆ ಚೇತನಾ ದೇಸಾಯಿಪಟ್ಟಿ, ಸಿದ್ಧಿ ತಪಶೆಟ್ಟಿ, ರಮ್ಯಾ ಜೋಶಿ, ಆರಾಧ್ಯ ಅವರನ್ನು ಸನ್ಮಾನಿಸಲಾಯಿತು.