ಬಯಲುತುಂಬರಗುದ್ದಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಶಿವಲಿಂಗೇಶ್ವರ ಜ್ಞಾನ ವಿಕಾಸ ಕೇಂದ್ರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನವೀನ್‌ಕುಮಾರ್ ಮಂಗಳವಾರ ಚಾಲನೆ ನೀಡಿದರು. ಸಮನ್ವಯಾಧಿಕಾರಿ ಸಾವಿತ್ರಿ, ಸಂತೋಷ, ಗ್ರಾಪಂ ಸದಸ್ಯರಾದ ದುರುಗಮ್ಮ, ಶಿವಮ್ಮ, ರಾಮಪ್ಪ ಇತರರಿದ್ದರು. 
ಜಿಲ್ಲೆ

ಸ್ವ ಉದ್ಯೋಗಕ್ಕೆ ಕೌಶಲ ತರಬೇತಿ ಅಗತ್ಯ

ಕುರುವತ್ತಿ ಶ್ರೀಕಾಂತಪ್ಪ

ಕಾನಹೊಸಹಳ್ಳಿ: ಮಹಿಳೆಯರಿಗೆ ಸ್ವ ಉದ್ಯೋಗ ಕೌಶಲ ಹೆಚ್ಚಿಸುವ ಉದ್ದೇಶದಿಂದ ಜ್ಞಾನ ವಿಕಾಸ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಟ್ಟೂರು ತಾಲೂಕು ಯೋಜನಾಧಿಕಾರಿ ಎಚ್.ಡಿ. ನವೀನ್‌ಕುಮಾರ್ ಹೇಳಿದರು.

ಸಮೀಪದ ಬಯಲುತುಂಬರಗುದ್ದಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶಿವಲಿಂಗೇಶ್ವರ ಜ್ಞಾನ ವಿಕಾಸ ಕೇಂದ್ರಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಧರ್ಮಸ್ಥಳ ಸಂಸ್ಥೆಯಿಂದ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಮಹಿಳೆಯರಿಗೆ ಅರಿವು ಮೂಡಿಸಲಾಗುತ್ತಿದೆ. ಹಣ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಲು ಸಲಹೆ ನೀಡುತ್ತಿದ್ದು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸ್ವ-ಸಹಾಯ ಸಂಘಗಳು ಸಹಕಾರಿಯಾಗಿವೆ ಎಂದರು.

ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಾವಿತ್ರಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಜಿ. ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ದುರುಗಮ್ಮ, ಶಿವಮ್ಮ, ರಾಮಪ್ಪ, ಮುಖಂಡರಾದ ಎಂ.ಬಸವರಾಜ, ಪಿ.ವಿ.ರುದ್ರೇಶ್, ಜಿ ಬಸವರಾಜ, ಪಿ. ವೀರೇಶ್, ವಲಯ ಮೇಲ್ವಿಚಾರಕಿ ಯಶೋದಾ, ಸೇವಾ ಪ್ರತಿನಿಧಿ ಈರಮ್ಮ ಇತರರಿದ್ದರು.