ಕೊಪ್ಪಳದ ಸಖಿ ಒನ್​ ಸ್ಟಾಪ್​ ಸೆಂಟರ್​ಗೆ ದಾಖಲಾದ ರೇಖಾ ಕುರಿತು ನ್ಯಾಯಾಧೀಶ ಮಲಕಾರಿ ರಾಮಪ್ಪ ಒಡೆಯರ್​ ಗುರುವಾರ ವಿಚಾರಿಸಿದರು. ಜಿಲ್ಲಾ ನ್ಯಾಯಾಲಯ ವ್ಯವಸ್ಥಾಪಕ ಬಸಪ್ಪ ಕಟ್ಟೇರ್​,ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಅನ್ನಪೂರ್ಣ, ಸಖಿ ಟಕದ ಆಡಳಿತಾಧಿಕಾರಿ ಯಮುನಾ ಬೆಸ್ತರ ಇದ್ದರು. 
ಜಿಲ್ಲೆ

ಅನಾಥ ಮಹಿಳೆಯರ ರಕ್ಷಣೆ, ಸಖಿ ಒನ್​ಸ್ಟಾಪ್​ ಸೆಂಟರ್​ಗೆ ದಾಖಲು

ಕೊಪ್ಪಳ: ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಸೂಚನೆ ಮೇರೆಗೆ ಸಖಿ ಒನ್​ ಸ್ಟಾಪ್​ ಸೆಂಟರ್​ ಅಧಿಕಾರಿಗಳು ಗುರುವಾರ ಇಬ್ಬರು ಅನಾಥ ಮಹಿಳೆಯರನ್ನು ರಸಿದರು. ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆಗಾಗಿ ಸಖಿ ಟಕಕ್ಕೆ ದಾಖಲಿಸಲಾಗಿದೆ.

ಕೊಪ್ಪಳ ಹೊರವಲಯದ ಎನ್​ಎಚ್​ 50ರ ಸೇತುವೆ ಅಡಿ ಇದ್ದ ರೇಖಾ ಹಾಗೂ ಹಿಟ್ನಾಳ ಕ್ರಾಸ್​ ಬಳಿ ರಸ್ತೆ ಪಕ್ಕದಲ್ಲಿ ಇದ್ದ ಮತ್ತೋರ್ವ ಮಹಿಳೆಯನ್ನು ರಸಲಾಯಿತು. ರೇಖಾ ಕಳೆದ ಕೆಲ ತಿಂಗಳಿಂದ ಸೇತುವೆ ಕೆಳಗೆ ವಾಸವಿದ್ದು, ಮಾಸಿಕವಾಗಿ ಕುಗ್ಗಿದ್ದಾಳೆ. ತಲೆಗೆ ಗಾಯಗಳಾಗಿವೆ. ಹಿಟ್ನಾಳ ಕ್ರಾಸ್​ ಬಳಿ ಮಹಿಳೆ ಎರಡು ವರ್ಷದಿಂದ ವಾಸವಿದ್ದು, ದಾರಿ ಹೋಕರು ನೀಡುವ ಆಹಾರ ಸೇವಿಸಿ ಜೀವಿಸಿದ್ದಾಳೆ. ಮುಂಬೈನ ಪುನಾದವಳಾಗಿದ್ದು, ಗಂಡ ತೀರಿಕೊಂಡಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಇಲ್ಲಿಯೇ ಉಳಿದಿದ್ದಾಳೆಂದು ಸ್ಥಳಿಯರು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಮಲಕಾರಿ ರಾಮಪ್ಪ ಒಡೆಯರ್​ ಖುದ್ದು ಸ್ಥಳಕ್ಕೆ ಭೇಟಿ ನೀಡಿದರು. ಸಖಿ ಟಕದ ಅಧಿಕಾರಿಗಳು, ಪೊಲೀಸರೊಂದಿಗೆ ರಸಿ ಆಸ್ಪತ್ರೆಗೆ ದಾಖಲಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣ ಓಂಕಾರ ಮಹಿಳೆಯರಿಬ್ಬರಿಗೆ ಚಿಕಿತ್ಸೆ ಹಾಗೂ ಆಹಾರ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆಪ್ತ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದರು.

ನ್ಯಾಯಾಧೀಶರು ಮಾತನಾಡಿ, ಈ ಬಗ್ಗೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಮಾಡಿ. ಮಹಿಳೆಯರ ಕುಟುಂಬಸ್ಥರ ಪತ್ತೆಗೆ ಯತ್ನಿಸಿ. ಚೇತರಿಕೆ ಕಂಡ ನಂತರ ಕುಟುಂಬಸ್ಥರು ಅಥವಾ ಮಹಿಳಾ ವಸತಿ ನಿಲಯಕ್ಕೆ ಕಳಿಸುವ ವ್ಯವಸ್ಥೆ ಮಾಡಿ. ಗುಣಮಟ್ಟ ಆಹಾರ, ಚಿಕಿತ್ಸೆ ಕೊಡಿಸಿ ಎಂದು ನಿರ್ದೇಶಿಸಿದರು.

ಜಿಲ್ಲಾ ನ್ಯಾಯಾಲಯ ವ್ಯವಸ್ಥಾಪಕ ಬಸಪ್ಪ ಕಟ್ಟೇರ್​, ಮಹಿಳಾ ಠಾಣೆ ಪಿಎಸ್​ಐ ಆಂಜನೇಯ, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಅನ್ನಪೂರ್ಣ, ಸಖಿ ಟಕದ ಆಡಳಿತಾಧಿಕಾರಿ ಯಮುನಾ ಬೆಸ್ತರ, ನೌಕರರಾದ ಾತಿಮಾ ಇತರರಿದ್ದರು.