ಜಿಲ್ಲೆ

ಏಳು ಕುಂಡಲಸ್ವಾಮಿ ಪೂಜೆ

ಚಳ್ಳಕೆರೆ: ನಗರದ ವಾಸವಿ ಮಹಲ್‌ನಲ್ಲಿ ಬುಧವಾರ ವಾಸವಿ ಮಹಿಳಾ ಮಂಡಳಿಯಿಂದ ಲೋಕ ಕಲ್ಯಾಣಾರ್ಥಕ್ಕಾಗಿ ಏಳು ಕುಂಡಲಸ್ವಾಮಿಯ ಪೂಜಾ ಕಾರ್ಯಕ್ರಮ ನೆರವೇರಿತು.

ತುಂಬು ಬಿಂದಿಗೆ ಸೇರಿ ಪೂಜಾ ಸಾಮಗ್ರಿಗಳೊಂದಿಗೆ ಆಗಮಿಸಿದ್ದ ನೂರಾರು ಮಹಿಳೆಯರು, ಗದ್ದುಗೆ ನಿರ್ಮಿಸಿ ತಿರುಮಲ ವೆಂಕಟಸ್ವಾಮಿಯ ಭಾವಚಿತ್ರ ಇರಿಸಿ, ಜ್ಯೋತಿ ಬೆಳಗಿ ವಿವಿಧ ಮಂತ್ರ ಪಠಣದೊಂದಿಗೆ ರಾಜ ಪುರೋಹಿತ ಕುಮಾರಸ್ವಾಮಿ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ನಾಗರಾಜ್, ಉಪಾಧ್ಯಕ್ಷೆ ಅನುಪಮಾ ಶ್ರೀನಿವಾಸ್, ಕಾರ್ಯದರ್ಶಿ ಲಲಿತಾಬಾಬು, ಸುಮಾ ರಾಜಶೇಖರ್ ಮತ್ತಿತರರು ಇದ್ದರು.

ಪಾದಪೂಜೆ: ತಾಲೂಕಿನ ಹೊಟ್ಟೆಪ್ಪನಹಳ್ಳಿ ಸಮೀಪದ ತಿಮ್ಮನಹಟ್ಟಿ ಗಡ್ಡೆಯಲ್ಲಿ ಲೋಕ ಕಲ್ಯಾಣಾರ್ಥಕ್ಕಾಗಿ ಮತ್ತು ಉತ್ತಮ ಮಳೆಗಾಗಿ ಲಕ್ಷ್ಮೀನರಸಿಂಹಸ್ವಾಮಿ ಪಾದಪೂಜಾ ಕಾರ್ಯಕ್ರಮ ನೆರವೇರಿತು.

ಪೂಜಾರಿ ಕೆ.ಉಜ್ಜಿನಪ್ಪ, ಭಕ್ತರಾದ ಆರ್.ದೇವೇಂದ್ರಪ್ಪ, ಎಲ್.ತಿಪ್ಪೇಸ್ವಾಮಿ, ಕೆ.ಸಿದ್ದೇಶ, ಎಚ್.ಕೆ.ಸ್ವಾಮಿ, ಜ್ಯೋತಿ, ಅಶ್ವಿನಿ ಮತ್ತಿತರರು ಭಾಗವಹಿಸಿದ್ದರು.