ಜಿಲ್ಲೆ

ಮಹಿಳೆಯರ ಪ್ರಗತಿಗೆ ಅಗತ್ಯ ಸಹಕಾರ: ಶಾಸಕಿ ಪೂರ್ಣಿಮಾ ಭರವಸೆ

Chitradurga

ಹಿರಿಯೂರು: ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಂಜೀವಿನಿ ವಾರದ ಸಂತೆ ಪೂರಕವಾಗಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತಾಂಬೆ ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ವೇದಾವತಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಂತೆಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಸ್ವ-ಉದ್ಯೋಗ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮನೆಯಲ್ಲಿ ತಾವೇ ತಯಾರಿಸಿದ ಅಲಂಕಾರಿಕ ವಸ್ತುಗಳು, ವಿವಿಧ ತಿಂಡಿ, ತಿನಿಸು, ದಿನಸಿ, ಜಮೀನಿನಲ್ಲಿ ಬೆಳೆದ ಬಾಳೆಹಣ್ಣು, ತರಕಾರಿಯನ್ನು ಮಹಿಳೆಯರು ಮಾರಾಟ ಮಾಡಿದರು.

ಜಿಪಂ ಸಿಇಒ ಡಾ.ನಂದಿನಿದೇವಿ, ತಾಪಂ ಮಾಜಿ ಸದಸ್ಯ ಯಶವಂತರಾಜ್, ಮಹಿಳಾ ಒಕ್ಕೂಟದ ಸದಸ್ಯರಾದ ಕಲ್ಪನಾ, ಮಂಜುಳಾ, ಗಾಯತ್ರಿ ಇತರರರಿದ್ದರು.