ಕೊಪ್ಪಳ : ತಾಲೂಕಿನ ತಾಳಕನಕಾಪುರ ಗ್ರಾಮದಲ್ಲಿ ಮಹಿಳೆಯನ್ನು ಕೊಲೆ ಮಾಡಿ ಬಾವಿಗೆ ಎಸೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಮೂವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗೀತಾ (25) ಕೊಲೆಯಾದ ಮಹಿಳೆ. ಈಕೆ ಪತಿ ಬಾಬು ಹಾಗೂ ಆತನ ತಂದೆ ಸಂಗಪ್ಪ, ತಾಯಿ ಗಂಗವ್ವ ಆರೋಪಿಗಳು. ಮೂವರು ಕೂಡಿಕೊಂಡು ಸಂಗೀತಾಳನ್ನು ಸೆ.15ರಂದು ಕೊಲೆ ಮಾಡಿದ್ದಾರೆ. ಯಾರಿಗೂ ತಿಳಿಯಬಾರದೆಂದು ಪ್ಲಾಸ್ಟಿಕ್ ಚೀಲದಲ್ಲಿ ಶವ ತುಂಬಿದ್ದಾರೆ. ಬಳಿಕ ಇರಕಲ್ಗಡಾದ ಪಟ್ಟಣಶೆಟ್ಟರ್ ಎಂಬುವರ ಬಾವಿಗೆ ಎಸೆದಿದ್ದಾರೆ. ಮಗಳು ಕಾಣದ ಪಾಲಕರು ವಿಚಾರಿಸಿದಾಗ ಕೊಲೆಯಾಗಿರುವುದ ಗೊತ್ತಾಗಿದೆ. ಮೃತಳ ತಾಯಿ ಹನುಮವ್ವ ನೀಡಿದ ದೂರಿನ ಅನ್ವಯ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.