ಹುಬ್ಬಳ್ಳಿ: ಮಹಿಳಾ ಸಾಹಿತ್ಯಕ್ಕೆ ಸಮಾಜ ತಿದ್ದುವ ಶಕ್ತಿ ಇದೆ. ಸಾಧನೆ ಮಾಡುವವರಿಗೆ ಮಾರ್ಗದರ್ಶನವನ್ನೂ ನೀಡುತ್ತದೆ. ಈ ದಿಸೆಯಲ್ಲಿ ಇಂದಿನ ಜಗತ್ತಿಗೆ ಇಂತಹ ಸಾಹಿತ್ಯದ ಅವಶ್ಯಕತೆ ಇದೆ ಎಂದು ಮೇಯರ್ ಜ್ಯೋತಿ ಪಾಟೀಲ್ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ನಗರ ಘಟಕದ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಸರ್ವರಂಗದಲ್ಲಿ ದಾಪುಗಾಲು ಇಡುತ್ತಿದ್ದು, ಸಾಹಿತ್ಯರಂಗದಲ್ಲೂ ಬಹಳಷ್ಟು ಸಾಧನೆ ಮಾಡಿದ್ದಾಳೆ. ಭಾನು ಮುಸ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಮಹಿಳಾ ಸಾಹಿತ್ಯ ಪರಿಷತ್ ಸಂಸ್ಥಾಪಕ ಗಂಗಾಧರ ದೊಡ್ಡವಾಡ ನೇತೃತ್ವದಲ್ಲಿ ಜರುಗಿದ ಸಮಾರಂಭದಲ್ಲಿ ವಿಶ್ವೇಶ್ವರಿ ಹಿರೇಮಠ, ಲಕ್ಷ್ಮೀ ಬಿಜ್ಜರಗಿ, ಸುಮಾ ಹಿರೇಮಠ, ಉಮಾ ಅಗಡಿ, ಸರೋಜಾ ಪಾಟೀಲ್, ಡಾ. ಶಾಂತಾ ಪಾಟೀಲಕುಲಕರ್ಣಿ, ಮಂಗಳಾ ನರವಣಿ, ಇತರರು ಉಪಸ್ಥಿತರಿದ್ದರು.
ಹುಬ್ಬಳ್ಳಿ ತಾಲೂಕು ನಗರ ಘಟಕದ ಅಧ್ಯಕ್ಷರಾಗಿ ಡಾ. ಸರ್ವಮಂಗಳ ಕುದರಿ, ಗೌರವಾಧ್ಯಕ್ಷರಾಗಿ ರೇಣುಕಾ ದೇಸಾಯಿ, ಗೌರವ ಸಲಹೆಗಾರರಾಗಿ ಅನ್ನಪೂರ್ಣ ಅಗಡಿ, ಉಪಾಧ್ಯಕ್ಷರಾಗಿ ಸರೋಜಾ ಪಾಟೀಲ್, ರಾಜೇಶ್ವರಿ ಜಡಿ, ಪ್ರಧಾನ ಕಾರ್ಯದರ್ಶಿಯಾಗಿ ದಾಕ್ಷಾಯಿಣಿ ಗೊಬ್ಬರಗುಂಪಿ, ಸಹಕಾರ್ಯದರ್ಶಿಯಾಗಿ ದಾಕ್ಷಾಯಿಣಿ ಕೋಳಿವಾಡ, ಸಂಘಟನಾ ಕಾರ್ಯದರ್ಶಿಗಳಾಗಿ ಡಾ. ಪೂರ್ಣಿಮಾ ನಾಡಿಗೇರ, ಡಾ. ಸಿದ್ದಲಿಂಗಮ್ಮ ಹಿರೇಮಠ, ಡಾ. ವಿನೋದಾ ಬಂಡಿ, ಗಾಯತ್ರಿ ರಾಮನಗೌಡರ, ಶಾರದಾ ಕುಂದಗೋಳಮಠ, ಶಾರದಾ ಬಡಿಗೇರ, ಶ್ರುತಿ ಹಿರೇಮಠ, ಮಂಜುಳಾ ಕಟ್ಟಿ, ಖಜಾಂಚಿಯಾಗಿ ಪ್ರಿಯಾಂಕಾ ಗದಗ, ವಿಸ್ಟರ ಎಲಿಜಬೆತ್, ಅನ್ನಪೂರ್ಣ ಕುಬಸದ, ನೀಲಾ ಕುಬಸದ, ಜಯಶ್ರೀ ನಿಂಬರಗಿ, ತೇಜಸ್ವಿನಿ ಬೆಂಗಳೂರು, ವೀಣಾ ಪರಮಾದಿ, ಮಂಗಲಾ ತಿಪ್ಪಶೆಟ್ಟಿ, ಭಾಗ್ಯಶ್ರೀ ಗಾಳಮ್ಮನವರ ಆಯ್ಕೆಯಾದರು.