ಜಿಲ್ಲೆ

ಬಸ್ ಸೀಟಿಗಾಗಿ ಮಹಿಳೆಯರ ಜಟಾಪಟಿ !

ಅವಿನಾಶ್ ಜೈನಹಳ್ಳಿ

ನಗರ ಸಾರಿಗೆ ಬಸ್‌ನಲ್ಲಿ ಶಕ್ತಿ ಯೋಜನೆ ಅಡಿ ಉಚಿತವಾಗಿ ಸಂಚರಿಸುತ್ತಿದ್ದ ಮಹಿಳೆಯರು ಸೀಟಿಗಾಗಿ ಪರಸ್ಪರ ಕಿತ್ತಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಭಾನುವಾರ ಚಾಮುಂಡಿಬೆಟ್ಟದಿಂದ ನಗರ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್‌ನಲ್ಲಿ ಮಹಿಳೆಯರು ಸೀಟಿಗಾಗಿ ಗಲಾಟೆ ಮಾಡಿಕೊಂಡಿದ್ದು, ಕೈಕೈ ಕೂಡ ಮಿಲಾಯಿಸಿದ್ದಾರೆ.

ಶಕ್ತಿ ಯೋಜನೆ ಅಡಿ ಅನೇಕ ಮಹಿಳೆಯರು ಸಿಟಿ ಬಸ್ ಮೂಲಕ ಚಾಮುಂಡಿಬೆಟ್ಟಕ್ಕೆ ತೆರಳಿದ್ದರು. ಬೆಟ್ಟದಿಂದ ವಾಪಸ್ ನಗರಕ್ಕೆ ಬರುತ್ತಿದ್ದ ಬಸ್ ಹತ್ತಲು ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಮಹಿಳೆಯೊಬ್ಬರು ಕಿಟಕಿಯ ಮೂಲಕ ಕರ್ಚೀಫ್ ಆಗಿ ಬಸ್‌ನೊಳಗೆ ಬಂದಿದ್ದಾರೆ. ಅಷ್ಟರಲ್ಲಿ ಮತ್ತೊಬ್ಬ ಮಹಿಳೆ ಸೀಟ್ ಮೇಲೆ ಹಾಕಿದ್ದ ಕರ್ಚೀಫ್ ತೆಗೆದು ಕುಳಿತಿದ್ದಾರೆ. ಇದರಿಂದ ಇಬ್ಬರು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಜಗಳವಾಡಿದ್ದಾರೆ. ತಕ್ಷಣ ಬಸ್‌ನಲ್ಲಿದ್ದ ಚಾಲಕ ಮತ್ತು ಕಂಡಕ್ಟರ್ ಮಹಿಳೆಯರನ್ನು ಸಮಾಧಾನಗೊಳಿಸಿದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.