ಬೆಳಗಾವಿ ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಅಂಗಡಿ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷೆ ಮಂಗಲಾ ಅಂಗಡಿ, ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ಪ್ರೊ. ಸಂಗೀತಾ ದೇಸಾಯಿ, ಪ್ರೊ. ಆಶಾ ರಜಪೂತ, ಪ್ರೊ. ಭಾರತಿ ಕಾಳೆ ಇತರರು ಇದ್ದರು. 
ಜಿಲ್ಲೆ

ಮಹಿಳೆಯರು ಹಿಂಜರಿಕೆ ಬಿಟ್ಟು ಸಾಧಿಸಿ

ಬೆಳಗಾವಿ: ಮಹಿಳೆ ಎಂಬ ಕೀಳರಿಮೆ, ಹಿಂಜರಿಕೆ ಬಿಟ್ಟು ಸಿಕ್ಕ ಅವಕಾಶ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ನಿರ್ದೇಶಕಿ ಡಾ. ಸ್ಫೂರ್ತಿ ಪಾಟೀಲ ಹೇಳಿದರು.

ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಲ್ಲಿ ನೈಸರ್ಗಿಕವಾಗಿ ತಾಳ್ಮೆ ಹಾಗೂ ವಿಶೇಷ ಸಾಮರ್ಥ್ಯವಿದೆ. ಮಹಿಳೆ ಎಂದಿಗೂ ಎದೆಗುಂದಬಾರದು. ಆತ್ಮವಿಶ್ವಾಸ, ಸ್ಪರ್ಧಾ ಮನೋಭಾವದಿಂದ ಸವಾಲು ಎದುರಿಸಿ ಯಶಸ್ಸು ಕಾಣಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿನಿಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯಶಸ್ವಿ ಮಹಿಳೆಯರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.

ಅಂಗಡಿ ಇಂಟರ್‌ನ್ಯಾಷನಲ್ ಸ್ಕೂಲ್ ಮುಖ್ಯಾಧ್ಯಾಪಕಿ ಆಶಾ ರಜಪೂತ ಮಾತನಾಡಿ, ಮಹಿಳೆ ಸ್ವಾವಲಂಬಿಯಾಗಿ ಬದುಕುವ ಸಾಮರ್ಥ್ಯ ಹೊಂದಿದ್ದಾಳೆ. ಅಗತ್ಯ ನೈಪುಣ್ಯತೆಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಸವಾಲು ಎದುರಿಸಿ ಮುನ್ನುಗ್ಗಬೇಕು ಎಂದರು. ಮಹಿಳಾ ದಿನಾಚರಣೆ ನಿಮಿತ್ತ ಡಿಜಿಟಲ್ ಲರ್ನಿಂಗ್ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕಿನ ಕಡೋಲಿ, ಕೆ.ಕೆ. ಕೊಪ್ಪ, ಹುದಲಿ, ಮುತ್ನಾಳ, ಸುಳೇಬಾವಿ, ಕಂಗ್ರಾಳಿ, ಮಚ್ಛೆ, ಕಲ್ಲೆಹೋಳ, ಮುಚ್ಚಂಡಿ, ಮೋದಗಾ, ಸಾಂಬ್ರಾ, ಮಾರಿಹಾಳ, ಕಿಣಯೇ, ಸುಳಗಾ, ಮಂಡೊಳ್ಳಿ, ಪೀರನವಾಡಿ, ಸಂತಿ ಬಸ್ತವಾಡ, ಕರ್ಲೆ, ಬೆಕ್ಕಿನಕೇರಿ, ಉಚಗಾಂವ, ದೇಸೂರು, ಯಳ್ಳೂರು ಮುಂತಾದ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳ 35 ಶಿಕ್ಷಕಿಯರಿಗೆ ಕಂಪ್ಯೂಟರ್ ತರಬೇತಿ ನೀಡಲಾಯಿತು. ಪಾಲ್ಗೊಂಡವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಂಗಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಮಂಗಲಾ ಅಂಗಡಿ, ಕಾಲೇಜ್‌ನ ಮಹಿಳಾ ಸಂಘದ ಸಂಯೋಜಕಿ ಪ್ರೊ.ಭಾರತಿ ಕಾಳೆ, ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಸಂಗೀತಾ ದೇಸಾಯಿ, ಪ್ರೊ.ಅನುರಾಧಾ ಹೂಗಾರ, ಪ್ರೊ.ಸಾರಿಕಾ ಪಾವಸೆ, ಡಾ. ರಶ್ಮಿ ಮಾಲ್ಗಾನ್, ಪ್ರೊ. ರಾಜೇಶ್ವರಿ ಕಿಸನ್, ಪ್ರೊ. ಸಂಜನಾ ಕವಟಗಿ, ಪ್ರೊ. ಸಂಧ್ಯಾ ಶಾನಭಾಗ್, ಶೋಭಾ ಎ., ಪ್ರೊ.ಪ್ರಿಯಾಂಕಾ ಪೂಜಾರಿ, ಪ್ರೊ. ಶೀತಲ ಪಾಟೀಲ, ಪ್ರೊ. ವಿನಯಚಂದ್ರಿಕಾ ಕಾಳೆ, ಮಂಜುಶ್ರೀ ಹಾವಣ್ಣವರ, ತೇಜಸ್ವಿನಿ ಸೊಬರದ, ಪ್ರೊ.ಅನುರಾಧಾ ಹೂಗಾರ, ಅರ್ಫಾ ಚಜ್ಜು, ಪ್ರೊ.ಐಶ್ವರ್ಯಾ ಮಾನೆ ಇದ್ದರು.

ಬೆಳಗಾವಿ ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಅಂಗಡಿ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷೆ ಮಂಗಲಾ ಅಂಗಡಿ, ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ಪ್ರೊ. ಸಂಗೀತಾ ದೇಸಾಯಿ, ಪ್ರೊ. ಆಶಾ ರಜಪೂತ, ಪ್ರೊ. ಭಾರತಿ ಕಾಳೆ ಇತರರು ಇದ್ದರು.