ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಸ್ ಹತ್ತುವ ವೇಳೆಯಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ದಲ್ಲಿದ್ದ ೧.೮೯ ಲಕ್ಷ ಮೌಲ್ಯದ ನಗ-ನಾಣ್ಯ ದೋಚಿದ ಘಟನೆ ನಡೆದಿದೆ.
ಸಹನಾ ಸಚ್ಚಿದಾನಂದ ಸುಂಕದ ಎಂಬುವರೇ ನಗ-ನಾಣ್ಯ ಕಳೆದುಕೊಂಡ ಮಹಿಳೆ. ಮನೆಗೆಲಸ ಮಾಡಿಕೊಂಡಿರುವ ಅವರು ಮೂಲತಃ ಚಿಂಚೋಳಿಯ ಕಲ್ಯಾಣಗಡ್ಡಿ ನಿವಾಸಿಯಾಗಿದ್ದಾರೆ. ೪೧ ಗ್ರಾಂ ಚಿನ್ನಾಭರಣಗಳು ಹಾಗೂ ೧೨ ಸಾ.ರೂ.ನಗದು ಕಳವು ಮಾಡಲಾಗಿದೆ.
ಸಂಬAಧಿಕರ ಮನೆಯಲ್ಲಿ ಜರುಗಿದ ಉಡಿ ತುಂಬ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿಂಚೋಳಿಯಿAದ ಐದು ವರ್ಷದ ಮಗನ ಜತೆಗೆ ಕಲಬುರಗಿಗೆ ಬಂದಿದ್ದರು. ಸಮಾರಂಭ ಮುಗಿಸಿಕೊಂಡು ಮರಳಿ ಚಿಂಚೋಳಿಗೆ ಹೋಗಲು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಗ ಜತೆಗೆ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗಿನ ಚೈನ್ ತೆರೆದು ಕಳ್ಳರು ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.