ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಚಾಲನ ನೀಡಿದರು. ಜಯರಾಮ್ ನೆಲ್ಲಿತ್ತಾಯ, ಅನಿಲ್‌ಕುಮಾರ್, ಮಮತಾ ರಾವ್ ಇತರರು ಇದ್ದರು. 
ಜಿಲ್ಲೆ

ಧರ್ಮಸ್ಥಳ ಸಂಸ್ಥೆಯಿಂದ ಮಹಿಳಾ ಸಬಲೀಕರಣ

ಲೋಕೇಶ್ ಮನು. ಡಿ

ಬೇಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯೂ ಹಲವು ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಹೇಳಿದರು.

ಆರ್ವಿ ಕನ್ವೆೆನ್ಷನ್ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನರಿಗೆ ಬ್ಯಾಂಕ್‌ಗಳಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಲ ಕೊಡುವುದಿಲ್ಲ. ಆದರೆ ಧರ್ಮಸ್ಥಳ ಸಂಸ್ಥೆಯಲ್ಲಿ ಬಡವರಿಗೆ ಸ್ವಸಹಾಯ ಸಂಘಗಳ ಮೂಲಕ ಸಾಲ ನೀಡುತ್ತಿದೆ. ಸಂಸ್ಥೆಯಿಂದ ಸಾಲ ಪಡೆದವರು ಅದರಿಂದ ಅಭಿವೃದ್ಧಿ ಹೊಂದಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕೆಲ ಫೈನಾನ್ಸ್‌ವರು ಮಾಡುವ ತಪ್ಪಿನಿಂದ ಎಲ್ಲ ಸಂಸ್ಥೆಗಳಿಗೂ ಕೆಟ್ಟ ಹೆಸರು ಬರುತ್ತದೆ. ಖಾಸಗಿ ಕಂಪನಿಯವರು ಜನರಿಂದ ಒತ್ತಾಯಪೂರ್ವಕ ಹಣ ವಸೂಲಿಗೆ ಮುಂದಾಗುವಂತಿಲ್ಲ. ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಸಾಲದ ಆಸೆ, ಆಮಿಷ ತೋರಲಾಗುತ್ತಿದ್ದು, ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದರು.

ಮೊಬೈಲ್‌ಗೆ ಬರುವ ಅನಾಮಧೇಯ ಕರೆಗಳಿಂದ ಒಟಿಪಿ ನಂಬರ್ ಹೇಳಿ ಸಾಕಷ್ಟು ಜನರು ಸೈಬರ್ ಕಳ್ಳತನ ಪ್ರಕರಣಕ್ಕೆ ಬಲಿಯಾಗಿದ್ದಾರೆ. ತಕ್ಷಣವೇ ಹಾಣ ವಾಪಸ್ ಕೊಡಿಸುವುದು ಕಷ್ಟಸಾಧ್ಯ ಎಂದು ಮಾಹಿತಿ ನೀಡಿದರು.

ಮಕ್ಕಳು, ಯುವಕರು ಬೈಕ್ ವ್ಹೀಲಿಂಗ್ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವಾಹನ ಮಾಲೀಕರು, ಪಾಲಕರು ಎಚ್ಚರ ವಹಿಸಬೇಕು ಎಂದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಮಾತನಾಡಿ, ಮಹಿಳೆಯರಿಗೆ ಆತ್ಮ ಸ್ಟೇರ್ಯ ತುಂಬುವಲ್ಲಿ, ಯಾರಿಗೂ ಅವಲಂಬಿತಾರಾಗದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರೀ ಧರ್ಮಸ್ಥಳ ಸಂಘವು ಅಡಿಪಾಯವಾಗಿದೆ. ನಮ್ಮ ಸಂಸ್ಥೆ 13 ವರ್ಷಗಳಿಂದ ಬೇಲೂರಿನಲ್ಲಿ ಸೇವೆಯೊಂದಿಗೆ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಸಸ್ಥೆಯಲ್ಲಿ 45 ಸಾವಿರ ಸಿಬ್ಬಂದಿ ಪೈಕಿ 40 ಸಾವಿರ ಜನ ಮಹಿಳೆಯರೇ ಕೆಲಸದಲ್ಲಿ ತೊಡಗಿದ್ದಾರೆ. ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಬೇಕೆಂಬುದು ಸಂಸೆಯ್ಥ ಗುರಿಯಾಗಿದೆ. ಅಲ್ಲದೆ ಆರ್ಥಿಕ ಬಂಡವಾಳ ಹೊದಿಕೆಯಲ್ಲಿ ಮುಂದಿದ್ದು, 13 ವರ್ಷಗಳಲ್ಲಿ 700 ಕೋಟಿ ರೂ. ಅಧಿಕ ಹಣದ ವ್ಯವಹಾರ ಮಾಡಿಕೊಂಡು ಬಂದಿದೆ. ಕೇವಲ ಆರ್ಥಿ ವ್ಯವಹಾರಕ್ಕೆ ಸೀಮಿತವಾಗದೆ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. ಎಲ್ಲರೂ ಇದರ ಸದೂಪಯೋಗ ಪಡೆದುಕೊಳ್ಳಬೇಕು ಎಂದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಒ ಅನಿಲ್‌ಕುಮಾರ್, ಜಿಲ್ಲಾ ನಿರ್ದೇಶಕಿ ಮಮತಾ ರಾವ್, ಕ್ಷೇತ್ರ ಯೋಜನಾಧಿಕಾರಿ ಟಿ.ಆರ್.ಮಂಜುಳಾ, ಶ್ರೀ ಚೆನ್ನಕೇಶವ ದೇಗುಲದ ಇಒ ಯೋಗೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಸೋಮಶೇಖರ್, ಮುಖಂಡರಾದ ದಯಾನಂದ್, ಮಂಜೇಗೌಡ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಉಮೇಶ್ ಭಟ್ ಸೇರಿದಂತೆ ಇತರರಿದ್ದರು.