ಜಿಲ್ಲೆ

ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಬಲಿ

ಬಾಬುರಾವ ಯಡ್ರಾಮಿ

ಮುನ್ನೆಚ್ಚರಿಕೆ ವಹಿಸದ್ದಕ್ಕೆ ಆಘಾತ | ಮುಂದುವರಿದ ಸಾವಿನ ಸರಣಿ | ಜಿಮ್ಸ್ ಎದುರು ಕುಟುಂಬಸ್ಥರ ಆಕ್ರಂದನ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ರಾಜ್ಯದಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿರುವ ಮಧ್ಯೆಯೇ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲೂ ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿಯೊಬ್ಬಳು ಮಂಗಳವಾರ ಮೃತಪಟ್ಟಿದ್ದಾಳೆ. ಅಫಜಲಪುರ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷÈವೇ ಇದಕ್ಕೆ ಕಾರಣ ಎಂದು ಸಂಬAಧಿಕರು ದೂರಿದ್ದಾರೆ.

ಆಳಂದ ತಾಲೂಕಿನ ಮಟಕಿ ಗ್ರಾಮದ ಭಾಗ್ಯಶ್ರೀ ಶಿವಾಜಿ (೨೨) ಮೃತಳು. ಸೋಮವಾರ ಮಧ್ಯಾಹ್ನ ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದು, ಮಂಗಳವಾರ ಬೆಳಗ್ಗೆ ಗಂಡು ಮಗುವಿಗೆ ಸಹಜ ಹೆರಿಗೆ ಮೂಲಕ ಜನ್ಮ ನೀಡಿದ್ದಾಳೆ. ನಂತರ ಬಿಪಿ ಕಡಿಮೆ ಆಗಿದೆ ಎಂದು ವೈದ್ಯರು ಹೇಳಿದಾಕ್ಷಣ ಆಂಬುಲೆನ್ಸ್ನಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ. ರಕ್ತದ ಕೊರತೆ ಇದೆ ಎಂದು ಜಿಮ್ಸ್ ಡಾಕ್ಟರ್ಸ್ ತಿಳಿಸಿ ಚಿಕಿತ್ಸೆಯೊಂದಿಗೆ ರಕ್ತ ನೀಡಲಾಗುತ್ತಿತ್ತು. ಆದರೂ ಬಾಣಂತಿ ಅಸುನೀಗಿರುವುದು ಕುಟುಂಬದವರನ್ನು ಕೆರಳಿಸಿದೆ.

ಅಫಜಲಪುರ ಆಸ್ಪತ್ರೆಯಲ್ಲಿ ವೈದ್ಯರು ಮುನ್ನೆಚ್ಚರಿಕೆ ಕ್ರಮದೊಂದಿಗೆ ಸಮರ್ಪಕ ಚಿಕಿತ್ಸೆ ನೀಡಿಲ್ಲ. ರೋಗಿ ಪರಿಸ್ಥಿತಿ ನೋಡಿ ಬೆಳಗ್ಗೆ ಬೇಗ ತಿಳಿಸಿದ್ದರೆ ಮಗಳು ಉಳಿಯುತ್ತಿದ್ದಳು. ಆದರೆ ಅಲ್ಲಿನ ಡಾಕ್ಟರ್ ಏನೂ ಹೇಳಲಿಲ್ಲ. ರಕ್ತಸ್ರಾವ ಸಹ ನಿಯಂತ್ರಿಸಲಿಲ್ಲ. ಇನ್ನು ಅಲ್ಲಿ ರಕ್ತವೂ ಇಲ್ಲದ್ದರಿಂದ ಕೊನೆಯುಸಿರೆಳೆದಿದ್ದಾಳೆ ಎಂದು ಹೇಳುತ್ತ ತಂದೆ ರಮೇಶ ಹೂಗಾರ ಕಣ್ಣೀರಿಟ್ಟರು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬAಧಿಕರ ಆಕ್ರಂಧನ: ವೈದ್ಯರ ನಿರ್ಲಕ್ಷದಿಂದ ಮಗಳ ಸಾವಾಗಿದೆ ಎಂದು ಸಂಬAಧಿಕರು ಜಿಮ್ಸ್ ಆಸ್ಪತ್ರೆ ಎದುರು ಕಣ್ಣೀರು ಇಡುತ್ತಿರುವ ದೃಶ್ಯ ಮನಕಲಕಿತು. ಇದೀಗ ಎರಡು ಮಕ್ಕಳು ತಬ್ಬಲಿಯಾಗಿವೆ. ಆಸ್ಪತ್ರೆಯಲ್ಲಿ ಬೇಕಾಬಿಟ್ಟಿ ವರ್ತನೆ ಮಾಡುತ್ತಾರೆ. ಸಿಬ್ಬಂದಿ ದೇವರಂತೆ ಆಡುತ್ತಾರೆ. ನಮ್ಮ ಮಗಳನ್ನು ಕೊಂದರು ಎಂದು ಕಣ್ಣೀರಿಟ್ಟರು. ಈ ಮಧ್ಯೆ ಆಸ್ಪತ್ರೆ ಸಿಬ್ಬಂದಿ ಹಾಗೂ ಕುಟುಂಬಸ್ಥರು, ರೈತ ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.