ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಶನಿವಾರ ಗ್ರಾಮದ ಗಾಯಿತ್ರಮ್ಮ ಮೃತಳಾಗಿರುವುದು. ಇನ್‌ಸ್ಪೆಕ್ಟರ್ ರೇವತಿ, ಗ್ರಾಮಸ್ಥರು ಇದ್ದರು. 
ಜಿಲ್ಲೆ

ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

ನಾಗೇಶ ಎಸ್

ಕಿಕ್ಕೇರಿ: ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಶನಿವಾರ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಮೃತಪಟ್ಟಿದ್ದಾರೆ.

ಗ್ರಾಮದ ಲೇ.ಕಾಳೇಗೌಡ ಪತ್ನಿ ಗಾಯತ್ರಮ್ಮ(45) ಮೃತರು. ಶುಕ್ರವಾರ ರಾತ್ರಿ ಜೋರು ಮಳೆಯಾಗಿತ್ತು. ಶನಿವಾರ ಬೆಳಗ್ಗೆ ಜಮೀನು ನೋಡಲು ತೆರಳಿದ್ದಾಗ ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಕಾಣದೆ ತುಳಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟರು.

ಕಿಕ್ಕೇರಿ ಪೊಲೀಸ್ ಠಾಣೆಗೆ ಮೃತರ ಪುತ್ರಿ ರುಕ್ಮಿಣಿ ದೂರು ನೀಡಿದ್ದಾರೆ. ಸೆಸ್ಕ್ ಬೇಜಾವಾಬ್ದಾರಿತನದಿಂದಲೇ ಈ ಅವಘಡ ಸಂಭವಿಸಿದ್ದು, ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆಯಲ್ಲಿ ಇನ್‌ಸ್ಪೆಕ್ಟರ್ ರೇವತಿ, ಸಿಬ್ಬಂದಿ, ಗ್ರಾಮ ಮುಖಂಡ ಚಂದ್ರು, ಬಬ್ರುವಾಹನ ಇತರರು ಇದ್ದರು.