ಜಿಲ್ಲೆ

ಐಬಿಎಂಆರ್ ನಲ್ಲಿ ಮಹಿಳಾ ಸಮ್ಮೇಳನ

ಹುಬ್ಬಳ್ಳಿ: ಮಹಿಳಾ ಸಬಲೀಕರಣಕ್ಕಾಗಿ ಅತ್ಯುತ್ತಮ ಸಂಶೋಧನೆ ಹಾಗೂ ಪ್ರಕಟಣೆಯ ಆಶಯದೊಂದಿಗೆ ಬುಧವಾರ ಇಲ್ಲಿಯ ಐಬಿಎಂಆರ್ ಕಾಲೇಜು ಕ್ಯಾಂಪಸ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ಏರ್ಪಡಿಸಲಾಗಿತ್ತು.

ಮೇಯರ್ ಜ್ಯೋತಿ ಪಾಟೀಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಸಹನಶೀಲತೆ, ಶಕ್ತಿ ಮತ್ತು ಸಮಾಜವನ್ನು ರೂಪಿಸುವ ಸಾಮರ್ಥ್ಯ ಅಗಾಧವಾದುದು. ನೀತಿಗಳನ್ನು ಪ್ರಭಾವಿತಗೊಳಿಸುವಲ್ಲಿ ಅವರ ಕೊಡುಗೆಗಳು ಪ್ರಮುಖವಾಗಿವೆ ಎಂದರು.

ಅತಿಥಿಯಾಗಿದ್ದ ಕೌಸಾಳಿ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡಿಸ್ ಡೀನ್ ಮತ್ತು ನಿರ್ದೇಶಕ ಡಾ. ಎನ್. ರಾಮಾಂಜನೇಯಲು, ಸಂಶೋಧನೆಯ ಮಹತ್ವ ಮತ್ತು ಜಾಗತಿಕ ವಲಯದಲ್ಲಿ ಮಹಿಳೆಯರ ಪಾತ್ರವನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಐಬಿಎಂಆರ್ ಸಂಸ್ಥಾಪಕ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ, ಮಹಿಳಾ ನಾಯಕತ್ವ ಮತ್ತು ಸಬಲೀಕರಣದ ಬಗ್ಗೆ ತಮ್ಮ ದೃಷ್ಟಿಕೋನ ಹಂಚಿಕೊಂಡರು.

ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ಐಬಿಎಂಆರ್ ಗ್ರುಪ್ ನಿರ್ದೇಶಕ ಟ್ರಸ್ಟಿ ಸುಮಾ ಮಹೇಂದ್ರಕರ ಮಾತನಾಡಿದರು.

ವಿಸ್ತಾರವಾದ ಚರ್ಚೆಗಳಲ್ಲಿ ತೊಡಗಿಸಿಕೊಂಡ ಗಣ್ಯರು ಅನೇಕ ವಿಚಾರಗಳನ್ನು ಮಂಡಿಸಿದರು. ಸಮ್ಮೇಳನ ಮಹಿಳೆಯರನ್ನು ಜಾಗತಿಕವಾಗಿ ಸಬಲಗೊಳಿಸುವ ಮತ್ತು ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಕಾರ್ಯಕ್ಕೆ ಸಾಕ್ಷಿಯಾಯಿತು.

ಕ್ಯಾಂಪಸ್ ನಿರ್ದೇಶಕ ಎಂ.ಎಸ್. ಬಿರಾದಾರ, ಪ್ರೊ. ರೇಖಾ ಮಹೇಂದ್ರಕರ, ಡಾ. ಎಚ್.ವಿ. ಬೆಳಗಲಿ, ಸುರೇಶ ಮೊಬಿನ್, ಪ್ರಭಾ ಹಂದಿಗೋಳ ಇತರರು ಇದ್ದರು.

ನಜೀಮ್ ಹುಸೇನ್ ಮಿಶ್ರಿಕೋಟಿ ಕಾರ್ಯಕ್ರಮ ನಿರೂಪಿಸಿದರು. ಐಬಿಎಂಆರ್ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಅರುಣ ಶೆಟ್ಟಿ ವಂದಿಸಿದರು.