ಅಳವಂಡಿ ಸಮೀಪದ ತಿಗರಿಯಲ್ಲಿ ನಾಗರ ಪಂಚಮಿ ಅಂಗವಾಗಿ ನಾಗಪ್ಪನಿಗೆ ಹಾಲೆರೆಯುತ್ತಿರುವ ಮಹಿಳೆಯರು. 
ಜಿಲ್ಲೆ

ಹಾಲೆರೆದು ಸಂಭ್ರಮಿಸಿದ ಮಹಿಳೆಯರು,ಮಕ್ಕಳು

ರುದ್ರಪ್ಪ ವಾಲಿ

ಅಳವಂಡಿ: ವಿವಿಧ ಗ್ರಾಮಗಳಲ್ಲಿ ನಾಗರ ಪಂಚಮಿ ಅಂಗವಾಗಿ ಎರಡನೇ ದಿನವಾದ ಭಾನುವಾರ ನಾಗಪ್ಪನಿಗೆ ಹಾಲೆರೆದು ಸಂಭಮಿಸಿದರು.

ಮಹಿಳೆಯರು ಮಕ್ಕಳು ಗುಂಪು ಗುಂಪಾಗಿ ದೇವಸ್ಥಾನ, ಬನ್ನಿಗಿಡದ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ಕಲ್ಲು ನಾಗಪ್ಪನಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ, ನೈವೇದ್ಯ ಸಲ್ಲಿಸಿ ಟೆಂಗಿನಕಾಯಿ ಒಡೆದು ನಂತರ ನಾಗಪ್ಪನಿಗೆ ಹಾಲೆರೆದರು.

ಶೇಂಗಾ ಉಂಡಿ, ಎಳ್ಳು ಉಂಡಿ, ಪುಟಾಣಿ ಉಂಡಿ, ರವೆ, ಹೆಸರು, ಹುರಿದ ಗೋದಿ ಹಿಟ್ಟಿನ ಉಂಡಿ ಇನ್ನು ಮುಂತಾದ ತಹರೇವಾರಿ ಉಂಡಿಗಳನ್ನು ತಯಾರಿಸಿ ನಾಗಪ್ಪನಿಗೆ ನೈವೇದ್ಯ ಸಲ್ಲಿಸಿ ನಂತರ ಬಂಧು ಬಳಗದವರೊಂದಿಗೆ ಸಹಭೋಜನ ಮಾಡಿದರು.