ಜಿಲ್ಲೆ

ಮಹಿಳೆಯರು ಸಬಲರಾಗಲಿ

ಬೋರಗಾಂವ: ಮಹಿಳೆಯರು ಆರ್ಥಿಕ ಸಬಲರಾಗಲಿ ಎಂಬ ಉದ್ದೇಶದಿಂದ ದಿ.ರಾವಸಾಹೇಬ ಪಾಟೀಲ, ಉದ್ಯಮಿ ಅಭಿನಂದನ ಪಾಟೀಲ ಅವರ ಮಾರ್ಗದರ್ಶನದಲ್ಲಿ ಅರಿಹಂತ ಗಾಮೆರ್ಂಟ್ಸ್ ಸ್ಥಾಪಿಸಲಾಗಿದೆ. ಇಲ್ಲಿ 120ಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ಪಡೆದಿದ್ದಾರೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರಿಹಂತ ಗಾಮೆರ್ಂಟ್ಸ್‌ನ 16ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಸಂಘದ ಸಿಇಒ ಆರ್.ಟಿ.ಚೌಗುಲಾ ಮಾತನಾಡಿ, ಅರಿಹಂತ ಕುಟುಂಬದಿಂದ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಉಪಾಧ್ಯಕ್ಷ ಸುಮಿತ ರೋಡ್, ನಿರ್ದೇಶಕ ಆರ್.ಬಿ.ಪಾಟೀಲ, ರಾಜೇಂದ್ರ ಐದ್ಮಲೆ, ಪ್ರವೀಣ ಪಾಟೀಲ, ದರ್ಶನ ಪಾಟೀಲ, ಪ್ರದೀಪ ಮಾಳಿ, ತೈಮೂರ ಮುಜಾವರ, ಅಣ್ಣಾಸೋ ಬಂಕಾಪುರೆ, ರಾಜು ಗಜ್ರೆ, ನಿರಂಜನ ಪಾಟೀಲ, ಗಜಾನನ ಕವಾಡಕರ, ಶೀತಲ ಚಿಪ್ರೆ, ಅಭಯಕುಮಾರ ಮಗದುಮ, ರಾಜು ಮಗದುಮ, ಜೈಪಾಲ ಹಾವಲೆ, ಮಾರುತಿ ನಿಕಂ, ಬೆಳಂಕೆ, ರಾಕೇಶ ಫಿರಗನ್ನವರ್, ವೈಶಾಲಿ ಮಹಾಜನ ಇತರರಿದ್ದರು.