ಜಿಲ್ಲೆ

ಮಹಿಳೆಯರು ಸಮಾಜದ ನಿಜವಾದ ಆಸ್ತಿ

ಎನ್.ಆರ್.ಪುರ: ಮಹಿಳೆಯರು ಕುಟುಂಬ ನಿರ್ವಹಣೆ ಜತೆಗೆ ಉದ್ಯೋಗವನ್ನು ಸಮರ್ಥವಾಗಿ ನಿರ್ವಹಿಸುತ್ತಾ ಸಮಾಜದ ಆಸ್ತಿಯಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.

ಸರ್ಕಾರಿ ಆಸ್ಪತ್ರೆ ಆವರಣದ ಸಭಾ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಜಾನಪದ ರಸ ಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಹಿಳೆಯರು ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದರು.

ಪಪಂ ಅಧ್ಯಕ್ಷೆ ಜುಬೇದ ಮಾತನಾಡಿ, ಪ್ರತಿಯೊಬ್ಬ ಮಹಿಳೆಯೂ ಪ್ರತಿ ದಿನ ಸುಖವಾಗಿರುವಂತೆ ಸಮಾಜ ನೋಡಿಕೊಳ್ಳಬೇಕು. ಸಾಧನೆ ಮಾಡಿದ ಪ್ರತಿಯೊಬ್ಬ ಮಹಿಳೆಯೂ ನಮಗೆ ಆದರ್ಶ ಪ್ರಾಯವಾಗಬೇಕು ಎಂದರು.

ಡಾ.ಚಂದ್ರಪ್ರಭ, ಶ್ರೀ ರಂಜಿನಿ, ಸುಜಾತ, ಡಾ.ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಜಾನಪದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ತೇಜಶ್ವಿನಿ ಮತ್ತು ತಂಡ ಪ್ರಥಮ, ಡಾ.ವಿನಯ್ ಮತ್ತು ತಂಡ ದ್ವಿತೀಯ ಹಾಗೂ ಮಮತಾ ಹಾಗೂ ತಂಡ ತೃತೀಯ ಬಹುಮಾನ ಅರಿವಳಿಕೆ ತಜ್ಞ ಡಾ.ವೀರಪ್ರಸಾದ್, ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ್‌ಗೌಡ, ಕಾರ್ಯದರ್ಶಿ ಮಿಥುನ್‌ಗೌಡ, ನಿಕಟಪೂರ್ವ ಅಧ್ಯಕ್ಷ ಎಂ.ಪಿ.ಮನು, ಜೇಸಿ ಉಪಾಧ್ಯಕ್ಷ ಅಪೂರ್ವ ರಾಘು, ಹಿರಿಯ ಶುಶ್ರೂಧಿಕಾರಿ ಜಯ, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.