ಬೀಳಗಿ ಪಟ್ಟಣದ ಬಸಲಿಂಗಮ್ಮ ಹೇಮನಗೌಡ ಜಕ್ಕನಗೌಡ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಶಾಸಕ ಜೆ.ಟಿ.ಪಾಟೀಲ ಉದ್ಘಾಟಿಸಿದರು. ಪ.ಪಂ. ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಗ್ಯಾರಂಟಿ ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಪ.ಪಂ. ಸದಸ್ಯರಾದ ಪಡಿಯಪ್ಪ ಕರಿಗಾರ, ಸಂಗಪ್ಪ ಕಂದಗಲ್ಲ ರಾಜು ಬೋರ್ಜಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷತೆ ಶಿವಗಂಗಾ ಪಾಟೀಲ, ಬಿಇಒ ಆರ್.ಎಸ್. ಆದಾಪುರ ಇತರರಿದ್ದರು. 
ಜಿಲ್ಲೆ

ಪ್ರತಿ ರಂಗದಲ್ಲಿ ಮಹಿಳೆಯರು ಮುಂಚೂಣಿ

ದತ್ತಾತ್ರೇಯ ಪಿ ಕುಲಕರ್ಣಿ

ಬೀಳಗಿ: ಪ್ರತಿಯೊಂದು ರಂಗದಲ್ಲಿ ಪುರುಷರಿಗಿಂತ ಹೆಚ್ಚು ಸಮರ್ಥವಾಗಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಎಲ್ಲ ರಂಗದಲ್ಲಿ ಛಾಪು ಮೂಡಿಸಿದ್ದಾರೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಇಲ್ಲಿನ ಬಸಲಿಂಗಮ್ಮ ಹೇಮನಗೌಡ ಜಕ್ಕನಗೌಡ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ಮಹಿಳೆಯರು ಮಾಡುವಷ್ಟು ತ್ಯಾಗ ಮತ್ತು ಶ್ರಮವನ್ನು ಪುರುಷರು ಮಾಡುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಮಹಿಳೆಯರಿಗೆ 5 ಗ್ಯಾರಂಟಿಗಳನ್ನು ಕೊಟ್ಟಿದೆ. ಕುಟುಂಬವನ್ನು ಸಮರ್ಥವಾಗಿ ನಿರ್ವಹಣೆ ಮಾಡುವಂತ ಶಕ್ತಿ ಮಹಿಳೆ ಇದೆ ಎಂದರು.

ಶಾಲಾ ಆವರಣದಲ್ಲಿ ಬಿಸಿ ಊಟದ ಸಿಬ್ಬಂದಿಯವರು ಮಧ್ಯಾಹ್ನ ಊಟದ ಆಹಾರದ ಬೇಳೆ ಕಾಳು ಸ್ವಚ್ಛತೆ ಮಾಡುವಾಗ ಪರಿಶೀಲನೆ ಮಾಡಬೇಕು. ಕಳಪೆ ಕಂಡುಬಂದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯ ಎಸ್.ಎಸ್. ಗೋಕಾವಿ ಸೂಚನೆ ನೀಡಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷತೆ ಶಿವಗಂಗಾ ಪಾಟೀಲ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಮನಗೌಡ ಜಕ್ಕನಗೌಡ್ರ, ಬಿಇಒ ಆರ್.ಎಸ್. ಆದಾಪುರ, ಝಡ್ಪಿ ಉಪವಿಭಾಗ ಎಇಇ ಗೋವಿದಂಪ್ಪ ಅರಳಿಕಟ್ಟಿ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಗ್ಯಾರಂಟಿ ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಪಪಂ ಸದಸ್ಯರಾದ ಪಡಿಯಪ್ಪ ಕರಿಗಾರ, ಸಂಗಪ್ಪ ಕಂದಗಲ್ಲ ರಾಜು ಬೋರ್ಜಿ ಇತರರಿದ್ದರು.