ಜಿಲ್ಲೆ

ಮಹಿಳಾ, ಮಕ್ಕಳ ದಸರಾ ಉತ್ಸವ 28ರಿಂದ

ಧಾರವಾಡ: ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯಿಂದ ಮಹಿಳಾ ಮತ್ತು ಮಕ್ಕಳ ದಸರಾ ಉತ್ಸವವನ್ನು ಸೆ. 28ರಿಂದ 30ರವರೆಗೆ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯೆ ಜಯಶ್ರೀ ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಗಾಂಽನಗರದ ಈಶ್ವರ ದೇವಸ್ಥಾನದಲ್ಲಿ 28ರಂದು ಮಧ್ಯಾಹ್ನ 2 ಗಂಟೆಗೆ ರಾಗಿ ಹಿಟ್ಟಿನಿಂದ ಸಿಹಿ ಪದಾರ್ಥ ತಯಾರಿ ಸ್ಪರ್ಧೆ, 3 ಗಂಟೆಗೆ ರಂಗೋಲಿ ಸ್ಪರ್ಧೆ ಜರುಗಲಿದೆ. 29ರಂದು ಮಧ್ಯಾಹ್ನ 2 ಗಂಟೆಗೆ 14 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 3 ಗಂಟೆಗೆ ಮಹಿಳಾ ಮಂಡಳಗಳಿ0ದ ದೇವಿ ಕುರಿತು ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. 30ರಂದು ಬೆಳಗ್ಗೆ 11ಕ್ಕೆ ಸಾಂಪ್ರದಾಯಿಕ ಉಡುಗೆ ತೊಡುಗೆಯ ಫ್ಯಾಶನ್ ಶೋ ಆಯೋಜಿಸಲಾಗಿದೆ ಎಂದರು.