ಶಿಕಾರಿಪುರ: ಹೆಣ್ಣು ಮಕ್ಕಳು ಇಂದು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಸಹನೆಗೆ ಭೂಮಿಯ ಹೊರತಾಗಿ ಮತ್ತೊಂದು ಹೆಸರೇ ಸ್ತ್ರೀ ಎಂದು ಹಿಂದು ಸೇವಾ ಪ್ರತಿಷ್ಠಾನದ ನಿರ್ದೇಶಕ ಸುರೇಶ್ ಜೀ ಹೇಳಿದರು.
ತೊಗರ್ಸಿಯಲ್ಲಿ ಹಿಂದು ಸೇವಾ ಪ್ರತಿಷ್ಠಾನದಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರಕುಶಲಗಳಲ್ಲಿ ಹೆಣ್ಣು ಮಕ್ಕಳು ಅತ್ಯಂತ ಪ್ರಾವೀಣ್ಯತೆ ಹೊಂದಿರುತ್ತಾರೆ. ಕುಸರಿ ಕಲೆ, ಹೊಲಿಗೆ ಸೇರಿದಂತೆ ಸಣ್ಣ ಸಣ್ಣ ಕೆಲಸಗಳಿಗೂ ಅವರ ನೀಡುವ ಪ್ರಧಾನ್ಯತೆ ದೊಡ್ಡದು. ಹೈನೋದ್ಯಮ ಸೇರಿದಂತೆ ವಿವಿಧ ರೀತಿಯ ಉದ್ಯೋಗಗಳಿಂದ ಕುಟುಂಬದ ನಿರ್ವಹಣೆಯಲ್ಲಿ ಅವರದ್ದು ಸಿಂಹ ಪಾಲು ಎಂದರು.
ಗ್ರಾಪಂ ಅಧ್ಯಕ್ಷ ಎಸ್.ನಿರಂಜನ್ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಕವಲಿ ಸುಬ್ರಹ್ಮಣ್ಯ, ಶಿವಯೋಗಿ ಗೌಡ, ವಿನೋದ ಕುಮಾರ್, ರೇವತಿ, ವಿಜಯಲಕ್ಷ್ಮೀ ಇತರರಿದ್ದರು.