??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ರೈತ ಮಹಿಳೆಯ ಸಮಗ್ರ ಕೃಷಿ ವಾರ್ಷಿಕ 20 ಲಕ್ಷ ರೂ.ವರೆಗೆ ಲಾಭ

ಎಂ.ಎಸ್​.ಸಿದ್ದಲಿಂಗೇಶ್ವರ, ಮಾಗಡಿ

ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗದೆ ಎಲ್ಲ ರಂಗದಲ್ಲೂ ಸಾಧನೆಯ ಶಿಖರ ಏರುತ್ತಿದ್ದಾಳೆ. ಅದರಂತೆ ಇಲ್ಲೊಬ್ಬರು ನಗರ ಪ್ರದೇಶದಲ್ಲಿ ಹುಟ್ಟಿ ಗ್ರಾಮೀಣ ಭಾಗದಲ್ಲಿ ತರಕಾರಿ, ಹೂವು, ಹಣ್ಣು ಬೆಳೆದು ಪ್ರಗತಿಪರ ರೈತ ಮಹಿಳೆಯಾಗಿ ಸಾಧನೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ.

ಕುದೂರು ಹೋಬಳಿ ಮಲ್ಲಿಗುಂಟೆ ಗ್ರಾಮದ ಸೌಭಾಗ್ಯ ಬೆಂಗಳೂರಿನಲ್ಲಿ ಓದಿ ರೈತನನ್ನು ವಿವಾಹವಾಗಿ ಸಾವಯುವ ಬೇಸಾಯದಲ್ಲಿ ಮಾದರಿಯಾಗಿದ್ದಾರೆ. ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ 5 ಎಕರೆ ಜಮೀನಿನಲ್ಲಿ ನೈಸರ್ಗಿಕ ಬೇಸಾಯದಲ್ಲಿ ತೊಡಗಿದ್ದಾರೆ. ರೇಷ್ಮೆ, ಜೇನು, ಮೀನು, ಕುರಿ, ಕೋಳಿ, ಹಸು, ಮೇಕೆ ಸಾಕಾಣಿಕೆ ಮಾಡುವ ಇವರು, ಕೃಷಿಗಾಗಿ ಎರೆಹುಳು ಟಕ, ಜೀವಾಮೃತ ಟಕ, ಚೆಕ್​ ಡ್ಯಾಂ ನಿರ್ಮಿಸಿಕೊಂಡಿದ್ದಾರೆ. ಅಡಕೆ, ತೆಂಗು, ಮಾವು, ಹುಣಸೆ, ತೇಗ, ಸಿಲ್ವರ್​, ಮಹಾಗನಿ, ಹುಣಸೆ, ರಾಗಿ, ಅಲಸಂದೆ, ತೊಗರಿ, ಬದನೆ, ಟೊಮ್ಯಾಟೊ, ಸೌತೆ ಬೆಳೆಯುತ್ತಿದ್ದಾರೆ.

ಇದರ ಜತೆಗೆ ಸೇವಂತಿಗೆ, ಚೆಂಡು ಹೂವು, ಬಟನ್ಸ್​, ಚಕ್ಕೆ, ಲವಂಗ, ಏಲಕ್ಕಿ, ಮೆಣಸು, ಸರ್ವ ಸಾಂಬಾರು, ಪುನರ್​ಪುಳಿ, ವಾಟರ್​ ಆಪಲ್​, ಕಿತ್ತಳೆ, ಆಪಲ್​, ಅಂಜೂರ, ಬಟರ್​್ರೂಟ್ಸ್​, ಪಪ್ಪಾಯ, ನೆಲ್ಲಿ, ಸಪೋಟ, ಸೀಬೆ, ಹಲಸು, ದಾಳಿಂಬೆ, ನೇರಳೆ, ನುಗ್ಗೆ, ಸೀತಾಫಲ ಬೆಳೆದಿದ್ದಾರೆ. ಕೆಲವು ಬೆಳೆಗಳಿಗೆ ಹೆಚ್ಚು ಗಾಳಿ ಬಾರದಂತೆ ವಿಂಡ್​ ಬ್ಲೊಕ್​ ಟ್ರೀಗಳನ್ನು ಬೆಳೆದು ಸುರಕ್ಷತೆ ಕೈಗೊಂಡಿದ್ದಾರೆ.

ವಿವಿಧ ದೇಶಗಳ ಕೃಷಿ ಅಧ್ಯಯನಕ್ಕೆ ಆಸಕ್ತಿ

ಕೃಷಿ ಪಂಡಿತೆ ಎಂದೇ ಜಿಲ್ಲೆಯಲ್ಲಿ ಪರಿಚಿತರಾಗಿರುವ ಸೌಭಾಗ್ಯ ವಿವಿಧ ದೇಶಗಳಲ್ಲಿನ ಕೃಷಿ ಬಗ್ಗೆ ಅಧ್ಯಯನ ಮಾಡುವ ಆಸಕ್ತಿ ಹೊಂದಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದರೆ, ಕೃಷಿಯಲ್ಲಿ ಮತ್ತಷ್ಟು ಹೊಸ ಮಾದರಿ ಅವಲಂಬಿಸಿಕೊಂಡು ಸಾವಿರಾರು ರೈತರಿಗೆ ಮಾದರಿಯಾಗಲಿದ್ದಾರೆ ಎಂಬುದು ರೈತರ ಅಭಿಪ್ರಾಯ.

ಜಮೀನು ಬಳಿಯೇ ಖರೀದಿ

ಸ್ಥಳಿಯವಾಗಿ ಹಾಗೂ ಬೆಂಗಳೂರು, ತುಮಕೂರು, ನೆಲಮಂಗಲ ಭಾಗಗಳಲ್ಲಿ ಮಾರಾಟ ಮಾಡುತ್ತಾರೆ. ಅದರಂತೆ ಹೂವು, ತರಕಾರಿಗಳನ್ನು ಬೆಂಗಳೂರು, ನೆಲಮಂಗಲ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೆ, ಬಹು ವಾರ್ಷಿಕ ಬೆಳೆಗಳಿಗೆ ಸಾವಯುವ ಪದ್ಧತಿಯಾಗಿ ಗೊಬ್ಬರ, ಕೀಟ ನಿರ್ವಹಣೆಗೆ ಜೈವಿಕ ಪದ್ಧತಿಯಲ್ಲಿ ಕೀಟ ನಿರ್ವಹಣೆ ಮಾಡುತ್ತಿರುವುದರಿಂದ ಇವರು ಬೆಳೆದ ತರಕಾರಿ, ಹೂವು, ಹಣ್ಣು, ಸೊಪ್ಪುಗಳಿಗೆ ಭಾರಿ ಬೇಡಿಕೆಯಿದ್ದು, ಜನರು ಜಮೀನಿನ ಬಳಿಯೇ ತೆರಳಿ ಖರೀದಿಸುತ್ತಾರೆ.

ಅಂತರ್ಜಲ ವೃದ್ಧಿಗೆ ಒತ್ತು

ತೆಂಗಿನ ಮರಗಳಿಗೆ ದುಂಬಿ ಕಾಟದಿಂದ ರಾಜ್ಯ ವ್ಯಾಪ್ತಿ ಸಾವಿರಾರು ತೆಂಗಿನ ಮರಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಬಕೆಟ್​ ಟ್ರಾಫ್​ ಮೂಲಕ ದುಂಬಿ ತಡೆಗಟ್ಟುವ ವೈಜ್ಞಾನಿಕ ಪದ್ಧತಿಗೆ ಮುಂದಾಗಿ ಯಶಸ್ವಿಯಾಗಿದ್ದಾರೆ. 5 ಎಕರೆ ಜಮೀನಿಗೆ ಸುಮಾರು 3 ಕೊಳವೆ ಬಾವಿ ಕೊರೆಸಿದ್ದು, ಹವಾಮಾನಕ್ಕೆ ಅನುಗುಣವಾಗಿ ಸಮರ್ಪಕವಾಗಿ ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಮೂಲಕ ನೀರು ಹಾಯಿಸುತ್ತಿದ್ದಾರೆ. ಹೆಚ್ಚುವರಿಯಾಗಿ ನೀರು ಪೊಲು ಮಾಡದೆ ಇಂಗು ಗುಂಡಿ, ಚೆಕ್​ ಡ್ಯಾಂ ನಿರ್ಮಿಸಿ ಅಂತರ್ಜಲ ವೃದ್ಧಿಗೊಳಿಸುತ್ತಿದ್ದಾರೆ. ತಾವೇ ಟ್ರಾ$್ಯಕ್ಟರ್​ ಮೂಲಕ ಉಳುಮೆ ಮಾಡುತ್ತಿದ್ದಾರೆ. ಕೆಲಸಕ್ಕೆ ಅವಶ್ಯಕತೆ ಇದ್ದರೆ ಮಾತ್ರ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ.

ಕುಟುಂಬ ಸಾಥ್​

ಸೌಭಾಗ್ಯ ಅವರು ಜಿಕೆವಿಕೆ, ಕೆವಿಕೆ ಹಾಗೂ ತೋಟಗಾರಿಕೆ, ಕೃಷಿ ಇಲಾಖೆಯ ಮಾರ್ಗದರ್ಶನ ಪಡೆದು ಅದರಂತೆ ತರಕಾರಿ, ಹೂವು, ಹಣ್ಣು ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಇದಕ್ಕೆ ಪತಿ, ಮಗ, ಪತಿಯ ಅಣ್ಣ, ತಮ್ಮಂದಿರು ಸಾಥ್​ ನೀಡುತ್ತಿದ್ದಾರೆ. ತಿಂಗಳ, ಅರ್ಧ ವಾರ್ಷಿಕ, ವಾರ್ಷಿಕ ಬೆಳೆಗಳನ್ನು ಬೆಳೆಯುವ ಮೂಲಕ ವಾರ್ಷಿಕ ಆದಾಯವನ್ನಾಗಿ 20 ಲಕ್ಷ ರೂ.ಹೆಚ್ಚು ಹಣ ಸಂಪಾದನೆ ಮಾಡುತ್ತಾ ಕೃಷಿಯಲ್ಲಿ ಆರ್ಥಿಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ.

ಪ್ರಶಸ್ತಿಯ ಗರಿ

ಸಾಗರ ಸಂಗಮ ಸಾಂಸತಿಕ ಅಕಾಡೆಮಿ, ಚಿತ್ರದುರ್ಗ, ಸಾಗರದಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ, ಆಯ್ದಕ್ಕಿ ಲಕ್ಕಮ್ಮ ರಾಜ್ಯ ಪ್ರಶಸ್ತಿ, ತಾಲೂಕಿನ ತಿಪ್ಪಸಂದ್ರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಸಮ್ಮೇಳನ ಪ್ರಶಸ್ತಿ, ತಾಲೂಕು ಸ್ವಾತಂತ್ರ$್ಯ ದಿನ ಸೇರಿ ಹಲವು ಸಂ&ಸಂಸ್ಥೆಗಳು ಸೌಭಾಗ್ಯ ಅವರ ಸಾಧನೆಯನ್ನು ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಿವೆ. ಪ್ರಗತಿಪರ ರೈತ ಮಹಿಳೆ ಸೌಭಾಗ್ಯ ಕೃಷಿ ಅಲ್ಲದೆ, ಈಜು, ಕ್ರೀಡೆ, ನಾಟಕಗಳಲ್ಲಿ ಹಲವು ಪಾತ್ರಗಳಲ್ಲಿ ಅಭಿನಯಿಸುತ್ತಾರೆ.

ಸಮಗ್ರ ಕೃಷಿ ಅವಲಂಬಿಸಿಕೊಂಡರೆ ಹೆಚ್ಚು ಲಾಭಗಳಿಸಬಹುದು, ಮಹಿಳೆಯರು ಬ್ಯೂಟಿಷಿಯನ್​, ್ಯಾಕ್ಟರಿ, ಗಾರ್ಮೆಟ್ಸ್​ಗಳಿಗೆ ಹೋಗದೆ ಜಮೀನಿನಲ್ಲೇ ವೈಜ್ಞಾನಿಕವಾಗಿ ಕೃಷಿ ಅವಲಂಬಿಸಿಕೊಂಡರೆ ಪ್ರತಿ ತಿಂಗಳು 30 ಸಾವಿರ ಆದಾಯ ಪಡೆಯಬಹುದು.

ಸೌಭಾಗ್ಯ, ಪ್ರಗತಿಪರ ರೈತ ಮಹಿಳೆ

ಮಾಹಿತಿಗಾಗಿ ಸಂಪರ್ಕಿಸಿ

ಎಲ್ಲ ರೀತಿಯ ಬೆಳೆಗಳನ್ನು ಬೆಳೆದಿರುವ ಇವರ ಬೆಳೆಗಳನ್ನು ವೀಸಿ ಬೆಳೆ ಬೆಳೆಯುವ ಬಗ್ಗೆ ಪ್ರತಿ ದಿನ ಹಲವು ಕಡೆಗಳಿಂದ ನೂರಾರು ರೈತರು ಬಂದು ಮಾಹಿತಿ ಪಡೆಯುತ್ತಿದ್ದಾರೆ. ನಿತ್ಯ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಇವರನ್ನು ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ.

ಸೌಭಾಗ್ಯ: 94481485255.