ಗೋವಿಂದಗಿರಿ ತಾಂಡಾದಲ್ಲಿ ಮಹಿಳೆಗೆ ಇಲಿ ಜ್ವರ ಕಾಣಿಸಿದ್ದರಿಂದ ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಪಪಂ ಸದಸ್ಯ ಬಾಸೂ ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ ಇದ್ದರು. 
ಜಿಲ್ಲೆ

ಮಹಿಳೆಗೆ ಇಲಿ ಜ್ವರ ದೃಢ

ನರೇಶ್ ಕುಮಾರ್

ಕೂಡ್ಲಿಗಿ: ಸಮೀಪದ ಗೋವಿಂದಗಿರಿ ತಾಂಡಾದಲ್ಲಿ 23 ವರ್ಷದ ಮಹಿಳೆಗೆ ಇಲಿಜ್ವರ ದೃಢಪಟ್ಟಿದೆ.

ಇವರಿಗೆ ನ.12ರಂದು ಜ್ವರ ಕಾಣಿಸಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನ.19 ರಂದು ರಕ್ತ ಪರೀಕ್ಷೆ ನಡೆಸಿದಾಗ ಇಲಿಜ್ವರ ದೃಢಪಟ್ಟಿದೆ.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ್, ಸಿಬ್ಬಂದಿಯೊಂದಿಗೆ ತಾಂಡಾಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್ ಕುಮಾರ್ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಿ, ಮನೆಮನೆ ಸಮೀಕ್ಷೆ ಮಾಡಿಸಿದರು.

ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಹಾಗೂ ವಾರ್ಡ್ ಸದಸ್ಯ ಬಾಸೂ ನಾಯ್ಕ ಶುಕ್ರವಾರ ತಾಂಡಾದಲ್ಲಿ ಸ್ವಚ್ಛತೆ ಮಾಡಿಸಿ, ಆರೋಗ್ಯದ ಜಾಗೃತಿ ಮೂಡಿಸಿದರು.