ಜಿಲ್ಲೆ

ಕಬ್ಬಿನ ಹಾಲು ತೆಗೆಯುವ ಯಂತ್ರದಲ್ಲಿ ರಕ್ತ; ಬಟ್ಟೆ ಸಿಲುಕಿ ಮಹಿಳೆಯ ಸಾವು..

ಕೋಲಾರ: ಸ್ವಲ್ಪ ಜಾಗ್ರತೆ ತಪ್ಪಿದರೂ ಸಾಕು, ಯಮಪಾಶ ಕೊರಳಿಗೇ ಬಂದು ಬೀಳುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಎನ್ನಬಹುದು. ಏಕೆಂದರೆ ಸಣ್ಣದೊಂದು ಅಜಾಗರೂಕತೆಯಿಂದಾಗಿ ಇಲ್ಲೊಬ್ಬಳು ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್​​ಸನ್​ ಪೇಟೆಯಯಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ. ಕೌಸರ್ (37) ಎಂಬಾಕೆ ಸಾವಿಗೀಡಾದ ಮಹಿಳೆ. ಈಕೆ ಇಲ್ಲಿನ ತಹಸೀಲ್ದಾರ್ ಕಚೇರಿ ಬಳಿಯ ಅಂಗಡಿಯೊಂದರಲ್ಲಿ ಈ ದುರಂತಕ್ಕೀಡಾಗಿದ್ದಾಳೆ.

ಕಬ್ಬಿನ ಹಾಲು ತೆಗೆಯುವ ವೇಳೆ ಈಕೆಯ ಉಡುಪು ಯಂತ್ರಕ್ಕೆ ಸಿಲುಕಿ ದೇಹವನ್ನೂ ಬಳಿಗೆ ಎಳೆದುಕೊಂಡಿದ್ದರಿಂದ ಸಾವು ಸಂಭವಿಸಿದೆ. ರಾಬರ್ಟ್​ಸನ್​ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.