ಚಿಕ್ಕಮಗಳೂರು: ಆನ್‌ಲೈನ್ ವಂಚಕರ ಮೋಸದ ಜಾಲಕ್ಕೆ ಸಿಲುಕಿದ ಕಾಫಿ ನಾಡಿನ ಮಹಿಳೆಯೋರ್ವರು ಬರೋಬ್ಬರಿ ೯೧ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಪೇಸ್‌ಬುಕ್‌ನಲ್ಲಿ ಬಂದ ಲಿಂಕ್ ನೋಡಿದ ಮಹಿಳೆ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ಭಾವಿಸಿದ್ದಾರೆ. ಇದೇ ಆಕೆ ಹಣ ಕಳೆದುಕೊಳ್ಳಲು ಮೂಲ ಕಾರಣವಾಗಿದ್ದು ಮಾತ್ರ ವಿಪರ್ಯಾಸ.
ಚಿಕ್ಕಮಗಳೂರಿನ ಮಹಿಳೆಯೋರ್ವರು ಪೇಸ್‌ಬುಕ್ ನೋಡುವಾಗ ಲಿಂಕ್ ಒಂದು ಅವರ ಗಮನ ಸೆಳೆದಿದೆ. ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಗೆ ಮಾಡಿದರೆ ಕೆಲವೇ ದಿನಗಳಲ್ಲಿ ಹಣ ಡಬ್ಲಿಂಗ್ ಆಗುತ್ತದೆ ಎಂಬ ಲಿಂಕ್‌ನ ಮಾಹಿತಿಯನ್ನು ನಂಬಿದ ಮಹಿಳೆ ಆರಂಭದಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿದ್ದಾರೆ. ಹೀಗೆ ಹೂಡಿಕೆ ಮಾಡಿದ ಹಣ ಡಬ್ಬಲ್ ಆಗಿದ್ದರಿಂದಾಗಿ ಮಹಿಳೆಯ ನಂಬಿಕೆ ಇನ್ನಷ್ಟು ಹೆಚ್ಚಾಗಿದೆ. ಆಗ ಆಕೆ ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.
ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಬಂದ ಜಾಹಿರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಕ್ಷಣ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿದ್ದಾರೆ. ಹಣ ಇನ್ವೆಸ್ಟ್ ಮಾಡಿ ಡಬಲ್ ಪಡೆಯಿರಿ ಎಂದು ಕರೆ ಬಂದಿದೆ. ಮಹಿಳೆಗೆ ವಂಚಕರು ತಮ್ಮ ಕಂಪನಿಯ ಮೂಲಕ ಹಣ ಹಾಕಿ ಡಬಲ್ ಪಡೆಯಿರಿ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಹಂತ ಹಂತವಾಗಿ ಹಣ ಕಳಿಸಿದ್ದಾರೆ. ಈ ಮೂಲಕ ಬರೋಬ್ಬರಿ ೯೧ ಹಣವನ್ನು ವಂಚಕರಿಗೆ ಹಾಕಿ ಮಹಿಳೆ ಕಂಗಾಲಾಗಿದ್ದಾರೆ.
ಆರAಭದಲ್ಲಿ ಮಹಿಳೆ ಹಣ ಹೂಡಿಕೆ ಮಾಡಿದಾಗ ಆ ಹಣ ಅವರ ವಂಚಕರೇ ಸೃಷ್ಟಿದ ವ್ಯಾಲೆಟ್ ಖಾತೆಯಿಂದ ವಿತ್‌ಡ್ರಾವಲ್ ಮಾಡಿಕೊಳ್ಳಲು ಸಾಧ್ಯವಾಗಿದೆ. ಹೀಗಾಗಿ ವಂಚಕರನ್ನು ನಂಬಿದ ಮಹಿಳೆ ಹೆಚ್ಚು ಹೆಚ್ಚು ಹಣ ವಿನಿಯೋಗಿಸಲು ಆರಂಭಿಸಿದ್ದಾರೆ. ಹೀಗೆ ಹಣ ವಿನಿಯೋಗಿಸಲು ಆರಂಭಿಸಿದAತೆ ವಂಚಕರು ಸೃಷ್ಟಿಸಿದ್ದ ವ್ಯಾಲೆಟ್‌ನಲ್ಲಿ ಆಕೆ ಹೂಡಿದ ಹಣ ಹಾಗೂ ಆಕೆಯ ಹಣ ದುಪ್ಪಟ್ಟಾಗಿರುವುದಾಗಿ ತೋರಿಸಲಾಗಿದೆ. ಆದರೆ ಹಣವನ್ನು ವಿತ್‌ಡ್ರಾವಲ್ ಮಾಡಲು ಸಾಧ್ಯವಾಗಿಲ್ಲ. ಆಗ ಆಕೆ ಈ ಬಗ್ಗೆ ವಂಚಕರಿಗೆ ಮೆಸೇಜ್ ಮಾಡಿ ಪ್ರಶ್ನಿಸಿದಾಗ ತಾಂತ್ರಿಕ ಸಮಸ್ಯೆಯ ಸಬೂಬು ಹೇಳಿದ್ದಾರೆ.
ಆದರೆ ಅನುಮಾನಗೊಳ್ಳದ ಮಹಿಳೆ ಬಳಿಕ ದೊಡ್ಡ ಮಟ್ಟದ ಹಣg ಹೂಡಿಕೆ ಮಾಡಿದ ಬಳಿಕ ವಂಚಕರು ಮಹಿಳೆಯ ಕರೆಯನ್ನೂ ಸ್ವೀಕರಿಸದೆ, ಮೆಸೇಜ್‌ಗೂ ಉತ್ತರಿಸದೆ ನಂಬರ್‌ಗಳನ್ನು ಬದಲಿಸಿದ್ದಾರೆ. ಆಗ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಮಹಿಳೆ ಚಿಕ್ಕಮಗಳೂರಿನ ಸಿಇಎನ್ ಠಾಣೆಗೆ ಆಗಮಿಸಿ ತಮಗೆ ಆನ್‌ಲೈನ್‌ನಲ್ಲಿ ವಂಚನೆಯಾಗಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆ ಪೊಲೀಸರು, ಮಹಿಳೆಗೆ ೯೧ ಲಕ್ಷ ರೂ. ವಂಚಿಸಿರುವ ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.
ಕೋಟ್……
ಆನ್‌ಲೈನ್, ಸೈಬರ್ ಕ್ರೆÊಂ ಬಗ್ಗೆ ಸಾರ್ವಜನಿಕರಲ್ಲಿ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಮೋಸ ಹೋಗುವವರ ಸಂಖ್ಯೆ ಇz್ದೆÃ ಇದೆ. ಅದರಲ್ಲೂ ವಿದ್ಯಾವಂತರೇ ಹೆಚ್ಚು ವಂಚನೆಗೆ ಒಳಗಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಎಲ್ಲಿಯೂ ಒಂದೇ ದಿನದಲ್ಲಿ ಹಣ ದುಪ್ಪಟ್ಟು ಆಗುವುದಿಲ್ಲ ಎಂ£ಬ ಕನಿಷ್ಟ ಜ್ಞಾನ ಎಲ್ಲರಲ್ಲೂ ಇರಬೇಕು. ಸೈಬರ್ ಕ್ರೆÊಂ ವಂಚಕರ ಪತ್ತೆಗೆ ಕ್ರಮ ಕೈಗೊಂಡಿz್ದÉÃವೆ. ಈ ರೀತಿಯ ವಂಚನೆಗಳಿAದ ಜನ ಎಚ್ಚರಿಕೆಯಿಂದ ಇರಬೇಕು.
ವಿಕ್ರಮ ಅಮಟೆ, ಎಸ್.ಪಿ.ಚಿಕ್ಕಮಗಳೂರು