ಜಿಲ್ಲೆ

ಯಶಸ್ವಿ ಪುರುಷನ ಹಿಂದಿನ ಪ್ರೇರಕ ಶಕ್ತಿ ಮಹಿಳೆ

ಬಸವರಾಜ ವೀರಪ್ಪ ಗರಗ

ಮುಳಗುಂದ: ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದಿನ ಪ್ರೇರಕ ಶಕ್ತಿ ಮಹಿಳೆಯಾಗಿದ್ದಾಳೆ. ನಮ್ಮ ನಡುವೆ ಇದ್ದು ಸಾಧನೆ ಮಾಡಿದ ಎಲೆಮರೆಕಾಯಿಯಂತಿರುವ ಮಹಿಳೆಯರನ್ನೇ ನೀವು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಪ್ರಾಚಾರ್ಯ ಡಾ.ಆರ್.ಎಂ. ಕಲ್ಲನಗೌಡರ ಹೇಳಿದರು.

ಪಟ್ಟಣದ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜೇಶ್ವರಿ ಬಡ್ನಿ ಮಾತನಾಡಿ, ಮಹಿಳೆ ವಾತ್ಸಲ್ಯ, ಮಮತೆ, ತ್ಯಾಗ, ಅಕ್ಕರೆ, ಸಹನೆ ಎಲ್ಲದರ ಒಟ್ಟು ರೂಪ. ಮಹಿಳೆ ದೇಶದ ಶಕ್ತಿ. ಮಹಿಳೆ ತಾನು ಬೆಳೆಯುವ ಜತೆಗೆ ತನ್ನ ಸುತ್ತಲಿನ ಸಮಾಜವನ್ನು ಬೆಳೆಸುವ ಶಕ್ತಿ ಅವಳಿಗಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಸುಮನ್ ಚವಡಿ, ಹರ್ಷಲಾ ದೇಶಪಾಂಡೆ, ಮಹಿಳಾ ವಿಭಾಗದ ಸಂಚಾಲಕಿ ಅನುಪಮಾ, ಸಾಂಸ್ಕೃತಿಕ ವಿಭಾಗದ ಡಾ. ಶಿವಪ್ಪ ಎಸ್. ಮುದಿಯಜ್ಜನವರ, ಐಕ್ಯೂಎಸಿ ವಿಭಾಗದ ಸಂಚಾಲಕ ನಾಗರಾಜ ಎ., ಇತರರಿದ್ದರು.