ಜಿಲ್ಲೆ

ಮಹಿಳೆಯರಲ್ಲಿ ಹಿಂಜರಿಕೆ ಮನೋಭಾವ ಬೇಡ

Kopala - Desk - Eraveni

ಕುಕನೂರು: ಮಹಿಳೆಯರು ಕಿರು ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಬೇಕು ಎಂದು ವಿಕಾಸ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಬಾಳಪ್ಪ ನೋಟಗಾರ ಹೇಳಿದರು.

ಪಟ್ಟಣದಲ್ಲಿ ವಿಕಾಸ ಗ್ರಾಮೀಣಾಭಿವೃದ್ಧಿ, ಚಾರಿಟಬಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ಆಯೋಜಿಸಿದ್ದ ಮಹಿಳಾ ಸ್ವಾವಲಂಬಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಮಹಿಳೆಯರು ಹಳ್ಳಿಗಳಲ್ಲಿ ಹಿಂಜರಿಕೆಯಿಂದ ಹಿಂದೆ ಉಳಿಯಬಾರದು. ಕಿರು ಉದ್ಯಮ ಆರಂಭಿಸಿ ಬದುಕು ಕಟ್ಟಿಕೊಳ್ಳಬೇಕು. ಮಹಿಳೆಯರು ಸ್ವಾವಲಂಬಿಗಳಾದರೆ ಅವರ ಕುಟುಂಬ ಸಹ ಅಭಿವೃದ್ಧಿ ಹೊಂದುತ್ತದೆ. ಹತ್ತು ಹಲವಾರು ಯೋಜನೆಗಳು ಮಹಿಳೆಯರ ಅಭಿವೃದ್ಧಿಗಾಗಿ ಇವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಕೆನರಾ ಬ್ಯಾಂಕಿನ ಡಿವಿಜನಲ್ ಮ್ಯಾನೇಜರ್ ವೆಂಕಟ ನಾರಾಯಣ, ಕುಕನೂರು ಶಾಖೆ ಮ್ಯಾನೇಜರ್ ಅಲ್ಲಾಭಕ್ಷಿ ನದಾಫ್, ವಿಕಾಸ ಟ್ರಸ್ಟ್‌ನ ಸಹಾಯಕ ನಿರ್ದೇಶಕ ಕನಕಪ್ಪ ಇತರರಿದ್ದರು.

ಕುಕನೂರಿನಲ್ಲಿ ಮಹಿಳಾ ಸ್ವಾವಲಂಬಿ ಕಾರ್ಯಕ್ರಮ ನಡೆಯಿತು. ವಿಕಾಸ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಬಾಳಪ್ಪ ನೋಟಗಾರ, ಕೆನರಾ ಬ್ಯಾಂಕಿನ ಡಿವಿಜನಲ್ ಮ್ಯಾನೇಜರ್ ವೆಂಕಟ ನಾರಾಯಣ, ಕುಕನೂರು ಶಾಖೆ ಮ್ಯಾನೇಜರ್ ಅಲ್ಲಾಭಕ್ಷಿ ನದಾಫ್ ಇದ್ದರು.