ಜಿಲ್ಲೆ

ಕಿಟಕಿಯಲ್ಲಿಟ್ಟಿದ್ದ ಚಿನ್ನದ ಮಾಂಗಲ್ಯ ಸರ ದೋಚಿದ ಖದೀಮರು

Haveri - Kariyappa Aralikatti

ರಾಣೆಬೆನ್ನೂರ: ಮಲಗುವಾಗ ಮಾಂಗಲ್ಯ ಸರ ತೆಗೆದು ಕಿಟಕಿಯಲ್ಲಿಟ್ಟದ್ದನ್ನು ಯಾರೋ ಕಳ್ಳರು ದೋಚಿಕೊಂಡು ಹೋದ ಘಟನೆ ಇಲ್ಲಿಯ ವಿನಾಯಕ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಭಾಗ್ಯಶ್ರೀ ಅಪ್ಪಾಜಿಬನಪ್ಪಾ ಹೊಂಗಲ ಎಂಬುವರ ಸರ ಕಳ್ಳತನ ಮಾಡಿರುವುದು.
ಇವರು ಮನೆಯಲ್ಲಿ ರಾತ್ರಿ ಮಲಗುವ ಸಮಯದಲ್ಲಿ ಕೊರಳಲಿದ್ದ 2 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿಟಕಿಯ ಪಕ್ಕದ ಸೇಲ್ಫನಲ್ಲಿ ಇಟ್ಟಿದ್ದರು. ಅದನ್ನು ಯಾರೋ ಕಳ್ಳರು ಕಿಟಕಿಗೆ ಹಾಕಿದ್ದ ಸೊಳ್ಳೆಯ ಪರದೆ ಹರಿದು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.