ಕನಕಗಿರಿಯ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ 2ನೇ ವರ್ಷ ಪೂರೈಕೆ ಹಾಗೂ 500 ಕೋಟಿ ಮಹಿಳಾ ಪ್ರಯಾಣದ ಸಂಭ್ರಮಾಚಣೆ ಕಾರ್ಯಕ್ರಮದಲ್ಲಿ ಸಿಹಿ ಹಂಚಲಾಯಿತು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತ್ ಹುಸೇನ್, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ತಾಪಂ ಮಾಜಿ ಅಧ್ಯಕ್ಷರಾದ ಬಸವಂತಗೌಡ, ಮಲ್ಲಿಕಾರ್ಜುನ ಗೌಡ, ಸಂಚಾರಿ ನಿಯಂತ್ರಕ ಶ್ರೀರಾಮ್, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ಇತರರಿದ್ದರು. 
ಜಿಲ್ಲೆ

ಮಹಿಳೆಯರ ಉಚಿತ ಪ್ರಯಾಣಕ್ಕೆ ಎರಡು ವರ್ಷ

ಕನಕಗಿರಿ: ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರ ಉಚಿತ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಸೌಲಭ್ಯ ಕಲ್ಪಿಸಿ ಯಶಸ್ವಿಯಾಗಿ 2 ವರ್ಷಗಳಾಗಿದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತ್ ಹುಸೇನ್ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ 2 ನೇ ವರ್ಷ ಪೂರೈಕೆ ಹಾಗೂ 500 ಕೋಟಿ ಮಹಿಳಾ ಪ್ರಯಾಣದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ವಿಧಾನಸಭಾ ಚುನಾವಣೆ ಸಮಯದಲ್ಲಿ ಪಕ್ಷದ ನಾಯಕರು ಪಂಚ ಗ್ಯಾರಂಟಿಗಳನ್ನು ನೀಡಿದ್ದರು. ಅಭೂತಪೂರ್ವ ಗೆಲುವಿನ ನಂತರ ನೀಡಿದ ಐದು ಗ್ಯಾರಂಟಿಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಿಗೆ ಒದಗಿಸಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ ಎಂದರು.

ಅನುಷ್ಠಾನ ಸಮಿತಿ ಸದಸ್ಯರಾದ ಹನುಮಮ್ಮ ಪಾಟೀಲ್, ವೀರೇಶ ನವಲಿ, ಜಗದೀಶ ಅಂಗಡಿ, ಚನ್ನಬಸನಗೌಡ ಮುಸಲಾಪುರ, ಜಗದೀಶ ರಾಠೋಡ್, ನೀಲಕಂಠ ಬಡಿಗೇರ, ಕರಿಯಪ್ಪ, ಭೀಮೇಶ, ಗ್ಯಾನಪ್ಪ ಗೌರಿಪುರ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ತಾಪಂ ಮಾಜಿ ಅಧ್ಯಕ್ಷರಾದ ಬಸವಂತಗೌಡ, ಮಲ್ಲಿಕಾರ್ಜುನ ಗೌಡ, ಸಂಚಾರಿ ನಿಯಂತ್ರಕ ಶ್ರೀರಾಮ್, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ, ಪ್ರಮುಖರಾದ ರಾಜಾಸಾಬ್ ನಂದಾಪುರ, ಶರಣೇಗೌಡ, ಅನಿಲ್‌ಕುಮಾರ ಬಿಜ್ಜಳ ಇತರರಿದ್ದರು.