ಹಿರೇಕೆರೂರ: ಬಸ್ ಓವರ್ಟೇಕ್ ಮಾಡಲು ಹೋಗಿ ಬೈಕ್ವೊಂದು ರಸ್ತೆ ಬದಿಯ ಕಬ್ಬಿಣದ ಪೆಟ್ಟಿಗೆಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತ್ತಿದ್ದ ಮಹಿಳೆ ಮೃತಪಟ್ಟು ಮೈಕ್ ಸವಾರ ಗಾಯಗೊಂಡ ಘಟನೆ ತಾಲೂಕಿನ ಚಿಕ್ಕೇರೂರ-ಹಂಸಬಾವಿ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಚಿಕ್ಕೇರೂರ ಗ್ರಾಮದ ಖಾಸಗಿ ಶಾಲೆ ಶಿಕ್ಷಕಿ ಅಪಿರ್ತಾ ಚಂದ್ರಪ್ಪ ಸನ್ನೇರ (28) ಮೃತಳು. ಬೈಕ್ ಸವಾರ ರೋಹಿತ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಚಿಕ್ಕೇರೂರ ಗ್ರಾಮದಿಂದ ಹಂಸಬಾವಿ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಮುಂದೆ ಹೊರಟ್ಟಿದ್ದ ಬಸ್ ಓವರ್ಟೇಕ್ ಮಾಡಲು ಹೋಗಿ ರಸ್ತೆ ಬದಿಯ ಕಬ್ಬಿಣದ ಪೆಟ್ಟಿಗೆಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೆಳಗೆ ಬಿದ್ದ ಅಪಿರ್ತಾ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.