ಜಿಲ್ಲೆ

ಲಾರಿ ಡಿಕ್ಕಿಯಾಗಿ ಮಹಿಳೆ ಸಾವು; ಪತಿ, ಮಕ್ಕಳಿಗೆ ಗಾಯ

ರಾಣೆಬೆನ್ನೂರ: ಬೈಕ್​ಗೆ ಲಾರಿ ಹೊಡೆದ ಪರಿಣಾಮ ಲಾರಿ ಚಕ್ರದಲ್ಲಿ ಸಿಲುಕಿ ಮಹಿಳೆಯೊಬ್ಬಳು ಮೃತಪಟ್ಟ ಟನೆ ನಗರದ ಹಲಗೇರಿ ಕ್ರಾಸ್​ ಬಳಿ ಸೋಮವಾರ ಸಂಭವಿಸಿದೆ.

ತಾಲೂಕಿನ ಮೇಡ್ಲೇರಿ ಗ್ರಾಮದ ಹುಲಿಗೆಮ್ಮ ಚಿಕ್ಕಪ್ಪ ಕೂನಬೇವು (23) ಮೃತ ಮಹಿಳೆ. ಬೈಕ್​ ಓಡಿಸುತ್ತಿದ್ದ ಈಕೆಯ ಪತಿ ಚಿಕ್ಕಪ್ಪ ಸಣ್ಣನಿಲಪ್ಪ ಕೂನಬೇವು (29), ಇವರ ಮಕ್ಕಳಾದ ವಿಷ್ಣು ಮತ್ತು ಮಾಲತೇಶ ಎಂಬುವರು ಗಾಯಗೊಂಡಿದ್ದಾರೆ.

ಸೋಮವಾರ ನಗರದಲ್ಲಿ ರೈತ ಸಂಟನೆಗಳಿಂದ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡಿದ್ದ ಕಾರಣ ನಗರದ ಹಳೇ ಪಿ.ಬಿ. ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡಲಾಗಿತ್ತು. ಹೀಗಾಗಿ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಚಿಕ್ಕಪ್ಪ ತನ್ನ ಪತ್ನಿ ಹುಲಿಗೆಮ್ಮ ಹಾಗೂ ಮಕ್ಕಳನ್ನು ಬೈಕ್​ ಮೇಲೆ ಕುಂದರಿಸಿಕೊಂಡು ನಗರದಿಂದ ಮೇಡ್ಲೇರಿಗೆ ತೆರಳುತ್ತಿದ್ದ.

ಈ ಸಮಯದಲ್ಲಿ ಹಲಗೇರಿ ಕ್ರಾಸ್​ ಬಳಿ ಚಿಕ್ಕಪ್ಪ ಲಾರಿಯನ್ನು ಓವರಟೆಕ್​ ಮಾಡಿಕೊಂಡು ಮುಂದೆ ಹೋಗಿ ನಿಂತಿದ್ದಾನೆ. ಆದರೆ, ಲಾರಿ ಚಾಲಕ ಇದನ್ನು ಗಮನಿಸದೆ ಬೈಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಹುಲಿಗೆಮ್ಮ ಬೈಕ್​ ಮೇಲಿಂದ ಬಿದ್ದು ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ.

ಕೂಡಲೇ ಸ್ಥಳದಲ್ಲಿದ್ದ ಜನತೆ ಕೂಗಿ ಲಾರಿ ಚಾಲಕನ್ನು ತಡೆದಿದ್ದಾರೆ. ಇದರಿಂದ ಚಿಕ್ಕಪ್ಪ ಹಾಗೂ ಮಕ್ಕಳ ಜೀವ ಉಳಿದಿದೆ ಎಂದು ಪ್ರತ್ಯಕ್ಷದಶಿರ್ಗಳು ತಿಳಿಸಿದರು. ಟನೆಯಲ್ಲಿ ಗಾಯಗೊಂಡ ಚಿಕ್ಕಪ್ಪ ಹಾಗೂ ಮಕ್ಕಳನ್ನು ಚಿಕಿತ್ಸೆಗಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.