ವಿಜಯಪುರ ನಗರದಲ್ಲಿ ಬುಧವಾರ ಭಾರಿ ಮಳೆಗೆ ಮನೆ ಕುಸಿದ ಹಿನ್ನೆಲೆ ತಹಸೀಲ್ದಾರ್ ಸಿದ್ದರಾಮಯ್ಯ ಭೋಸಗಿ ಭೇಟಿ ನೀಡಿ ಪರಿಶೀಲನೆ ನಡೆದಿದರು.  
ಜಿಲ್ಲೆ

ವಿಜಯಪುರ: ವರುಣನ ಆರ್ಭಟಕ್ಕೆ ಮಹಿಳೆ ಬಲಿ

Bellari - Heera Nayak

ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಬುಧವಾರವೂ ವರುಣನ ಅಬ್ಬರ ಹೆಚ್ಚಾಗಿದ್ದು, ಸಿಡಿಲಿಗೆ ಮಹಿಳೆ ಮೃತಪಟ್ಟಿದ್ದಾರೆ. ತಾಳಿಕೋಟೆ ತಾಲೂಕಿನ ರಾಂಪುರ ಗ್ರಾಮದ ಜಮೀನಿನೊಂದರಲ್ಲಿ ಎಮ್ಮೆ ಮೇಯಿಸುತ್ತಿದ್ದ ವೇಳೆ ಹುಣಶ್ಯಾಳ ಗ್ರಾಮದ ಜೈನಾಬಿ ನಜೀರ ಅಹ್ಮದ ಸಿಪಾಯಿ (೫೫) ಮೃತಪಟ್ಟಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಒಟ್ಟು ೧೫ ಮನೆಗಳು ಕುಸಿದಿವೆ. ಇಂಡಿ ತಾಲೂಕಿನ ಬಳ್ಳೂಳ್ಳಿ ಗ್ರಾಮದಲ್ಲಿ ಮೂರು ಮನೆ, ತಾಳಿಕೋಟೆಯಲ್ಲಿ ಎರಡು, ವಿಜಯಪುರ ತಾಲೂಕು ವ್ಯಾಪ್ತಿ ಐದು, ಸಿಂದಗಿ, ತಿಕೋಟಾ ಹಾಗೂ ನಿಡಗುಂದಿ ತಾಲೂಕಿನಲ್ಲಿ ತಲಾ ಒಂದು ಮನೆಗಳಿಗೆ ಹಾನಿ ಆಗಿದೆ. ಸ್ಥಳಕ್ಕೆ ಆಯಾ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ೧೬.೩೮ ಮಿ.ಮೀ. ಮಳೆ ಆಗಿದೆ. ಬಸವನ ಬಾಗೇವಾಡಿ ೧೮.೨, ಮನಗೂಳಿ ೫.೧, ಆಲಮಟ್ಟಿ ೨೯.೬, ಹೂವಿನ ಹಿಪ್ಪರಗಿ ೧೩.೨, ಅರೇಶಂಕರ ೨೯.೦, ಮಟ್ಟಿಹಾಳ ೧೯.೦, ವಿಜಯಪುರ ೩೮.೬, ಭೂತನಾಳ ೧೪.೪, ಹಿಟ್ನಳ್ಳಿ ೨೧.೨, ತಿಕೋಟಾ ೨೧.೪, ಮಮದಾಪುರ ೩೧.೦, ಕುಮಟಗಿ ೧೧.೨, ಬಬಲೇಶ್ವರ ೨೩.೨, ಮುದ್ದೇಬಿಹಾಳ ೩.೬, ನಾಲತವಾಡ ೪೮.೪, ತಾಳಿಕೋಟೆ ೪೬.೧, ಢವಳಗಿ ೨೫.೦, ಸಿಂದಗಿ ೯.೨, ಆಲಮೇಲ ೮.೦, ಸಾಸಾಬಾಳ ೧೫.೨, ರಾಮನಹಳ್ಳಿ ೪.೮, ಕಡ್ಲೇವಾಡ ೨೧.೫, ದೇವರಹಿಪ್ಪರಗಿ ೧೪.೦, ಕೊಂಡಗೂಳಿ ೩೧.೦ ಮಿ.ಮೀ. ಮಳೆ ಆಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.