ಹೇಮಾವತಿ 
ಜಿಲ್ಲೆ

ವಿದ್ಯುತ್ ಶಾಕ್‌ನಿಂದ ಮಹಿಳೆ ಮೃತ್ಯು

ಕಾಸರಗೋಡು: ಮನೆಯಲ್ಲಿ ಅಡುಗೆ ಕೊಠಡಿಯೊಳಗೆ ಲೈಟ್ ಸ್ವಿಚ್ ಹಾಕುವ ವೇಳೆ ವಿದ್ಯುತ್ ಶಾಕ್ ತಗುಲಿ ಗೃಹಿಣಿ ಮೃತಪಟ್ಟಿದ್ದಾರೆ. ಮಾಯಿಪ್ಪಾಡಿ ಸನಿಹದ ಕುದ್ರೆಪ್ಪಾಡಿ ನಿವಾಸಿ ಗೋಪಾಲ ಗಟ್ಟಿ ಎಂಬುವರ ಪತ್ನಿ ಹೇಮಾವತಿ(53) ಮೃತಪಟ್ಟವರು. ಸೋಮವಾರ ರಾತ್ರಿ ಘಟನೆ ನಡೆದಿದೆ. ಅಡುಗೆ ಕೋಣೆಯ ಸ್ವಿಚ್ ಹಾಕುವ ವೇಳೆ ವಿದ್ಯುತ್ ಶಾಕ್ ತಗುಲಿದೆ. ವಿದ್ಯುತ್ ವಯರ್‌ನೊಳಗೆ ನೀರು ನುಗ್ಗಿ ಶಾಕ್ ತಗುಲಿರಬೇಕೆಂದು ಸಂಶಯಿಸಲಾಗಿದೆ. ಹೇಮಾವತಿ ಅವರನ್ನು ತಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.