ಜಿಲ್ಲೆ

ವಾಹನ ಪಲ್ಟಿಯಾಗಿ ಮಹಿಳೆ ಸಾವು

ಅರಕಲಗೂಡು: ತಾಲೂಕಿನ ಕರ್ಕಿಕೊಪ್ಪಲು ಬಳಿ ಮಂಗಳವಾರ ಚಲಿಸುತ್ತಿದ್ದ ಟಾಟಾ ಏಸ್ ವಾಹನ ಮಗುಚಿ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಬೆಳವಾಡಿ ಗ್ರಾಮದ ಸುಧಾ (45) ಮೃತ ಮಹಿಳೆ. ಸುಧಾ ಅವರ ಪುತ್ರಿ ಧನಲಕ್ಷ್ಮೀ (19) ಹಾಗೂ ಮತ್ತೊಬ್ಬ ಮಹಿಳೆ ಯಶೋದಮ್ಮ ಅವರು ಗಾಯಗೊಂಡಿದ್ದು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳವಾಡಿ ಕಡೆಯಿಂದ ಹಾನಗಲ್ ಮಾರ್ಗವಾಗಿ ಯಾಚನಕುಪ್ಪೆ ಕಡೆಗೆ ತೆರಳುತ್ತಿದ್ದ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕರ್ಕಿಕೊಪ್ಪಲು ಬಳಿ ಮಗುಚಿ ಬಿದ್ದಿದೆ. ಪರಿಣಾಮ ಸುಧಾ ಸ್ಥಳದಲ್ಲೇ ಮೃತಪಟ್ಟರೆ, ಉಳಿದಿಬ್ಬರು ಗಾಯಗೊಂಡರು. ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.