ಜಿಲ್ಲೆ

ವಿಷಸೇವಿಸಿ ಚಿಕಿತ್ಸೆಯಲ್ಲಿದ್ದ ಮಹಿಳೆ ಸಾವು

ಕಾಸರಗೋಡು: ವಿಷಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಕುಂಬಳೆ ಪೆರುವಾಡ್ ನಿವಾಸಿ ಅಬ್ದುಲ್ ರಹಮಾನ್ ನಫೀಸಾ ದಂಪತಿ ಪುತ್ರಿ, ಮಂಗಳೂರು ನಿವಾಸಿ ನಸೀಫ್ ಎಂಬುವರ ಪತ್ನಿ ಸಾಜಿದಾಬಾನು(32) ಮೃತಪಟ್ಟಿದ್ದಾರೆ. ಮಂಗಳೂರಿನ ಪತಿ ಮನೆಯಲ್ಲಿದ್ದ ಸಾಜಿದಾಬಾನು ಜೂನ್ 19ರಂದು ಪೆರುವಾಡಿನ ತಾಯಿ ಮನೆಗೆ ಆಗಮಿಸಿದ್ದು, ಸಹೋದರನ ಪತ್ನಿ ಹೊರತಾಗಿ ಮನೆಯವರು ವಿವಾಹ ಸಮಾರಂಭಕ್ಕೆ ತೆರಳಿದ್ದ ಸಂದರ್ಭ ವಿಷ ಸೇವಿಸಿದ್ದರು. ಸಹೋದರನ ಪತ್ನಿ ನೋಡುವಾಗ ಕೊಠಡಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಸಾಜಿದಾಬಾನು ಅವರನ್ನು ಆಸುಪಾಸಿನವರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.