ಜಿಲ್ಲೆ

ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ರುದ್ರಪ್ಪ ವಾಲಿ

ಹರಪನಹಳ್ಳಿ: ಶೇಂಗಾ ಬಳ್ಳಿ ಹಾಕುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಹಾರಕನಾಳು ದೊಡ್ಡತಾಂಡದಲ್ಲಿ ಶುಕ್ರವಾರ ನಡೆದಿದೆ.

ಸವಿತಾಬಾಯಿ (35) ಮೃತೆ. ಯಂತ್ರಕ್ಕೆ ಶೇಂಗಾ ಹಾಕುವಾಗ ಸೀರೆ ಸಿಲುಕಿಕೊಂಡು ಯಂತ್ರ ಎಳೆದ ರಭಸಕ್ಕೆ ಮುಖ, ಕುತ್ತಿಗೆಗೆ ಬಲವಾದ ಪೆಟ್ಟುಬಿದ್ದು ಮೃತಪಟ್ಟಿದ್ದಾರೆ. ಸುರಕ್ಷತಾ ಕ್ರಮ ಅನುಸರಿಸಿದ ಮಿಷನ್ ಮಾಲೀಕ ಯಂಕಾನಾಯ್ಕ, ಚಾಲಕ ಮಹಾಂತೇಶ ವಿರುದ್ಧ ದೂರು ದಾಖಲಾಗಿದೆ.