ಜಿಲ್ಲೆ

ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು

ಆರ್.ಕೃಷ್ಣ

ಮೈಸೂರು: ಹಬ್ಬಕ್ಕೆ ವಸ್ತು ಖರೀದಿಸಲು ಬಂದಿದ್ದ ಮಹಿಳೆಗೆ ನಗರ ಸಾರಿಗೆ ಬಸ್ ಡಿಕ್ಕಿಯೊಡೆದಿದ್ದರಿಂದ ಮೃತಪಟ್ಟಿದ್ದಾರೆ.
ಕುವೆಂಪುನಗರ ‘ಎಂ’ ಬ್ಲಾಕ್‌ನ ನಾಗರಾಜು ಪತ್ನಿ ಸುಶೀಲಾ (55) ಮೃತಪಟ್ಟವರು.
ಯುಗಾದಿ ಹಬ್ಬಕ್ಕಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆಗೆ ತೆರಳಲು ಅಗ್ರಹಾರದ ಬಳಿ ವಾಣಿ ವಿಲಾಸ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಡಿಕ್ಕಿಯೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ.
ಈ ಸಂಬಂಧ ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.