ಜಿಲ್ಲೆ

ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

ಎನ್.ವೆಂಕಟೇಶ್

ಗುಡಿಬಂಡೆ: ತಾಲೂಕಿನ ಕೊಂಡಾವಲಹಳ್ಳಿಯಲ್ಲಿ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಗೃಹಿಣಿ ಮೈಮೇಲೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆ.ಎಸ್​. ಜಯಶ್ರೀ(30) ಮೃತೆ. ತವರು ಮನೆಯ ಬಾತ್​ರೂಂನಲ್ಲಿ ಈ ಕೃತ್ಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜಯಶ್ರೀ ಗುಡಿಬಂಡೆ ಪಟ್ಟಣದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ 6 ತಿಂಗಳ ಹಿಂದೆ ಶಿಡ್ಲಟ್ಟ ತಾಲೂಕಿನ ಕೊಂಡಪ್ಪನಹಳ್ಳಿಯ ಚಂದ್ರಶೇಖರ್​ ಜತೆ ವಿವಾಹವಾಗಿತ್ತು. ಆತ್ಮಹತ್ಯೆಗೂ ಮುನ್ನ ಜಯಶ್ರೀ ಫೇಸ್​ಬುಕ್​ ಖಾತೆಯಲ್ಲಿ ಪತಿ ಚಂದ್ರಶೇಖರ್​ ಅವರು ಬೇರೆ ಯುವತಿ ಜತೆಗೆ ನಿರಂತರವಾಗಿ ಚಾಟಿಂಗ್​ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದಾಗ, ಪತಿಯಿಂದ ತೀವ್ರ ಕಿರುಕುಳ ಎದುರಿಸಬೇಕಾಯಿತು. ಪತಿಯ ಈ ಕಿರುಕುಳ ಮತ್ತು ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್​ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಟನೆ ನಡೆದ ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.