ಸವಣೂರ: ಮನೆ ಕಟ್ಟುವ ಸಲುವಾಗಿ ಮಾಡಿದ ಸಾಲ ತೀರಿಸಲಾಗದೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದಿದೆ.
ದ್ಯಾಮವ್ವ ಗೂಳಪ್ಪ ತಿಮ್ಮಾಪುರ (45) ಮೃತ ಮಹಿಳೆ.
ಇವರು ಮನೆ ಕಟ್ಟುವ ಸಲುವಾಗಿ ವಿವಿಧ ಸಂಘ ಹಾಗೂ ಬ್ಯಾಂಕ್ನಲ್ಲಿ 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ, ಸಾಲದ ಕಂತು ತುಂಬಲಾಗದೆ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.