ಕುಂದಾಪುರ: ಬಿದ್ಕಲ್‌ಕಟ್ಟೆಯ ಸಂತೋಷ್ ಎಂಬುವರು ಬೀಜಾಡಿ ಗ್ರಾಮದ ತೆರೆಸಾ ಮೆಂಡೊನ್ಸಾ ಎಂಬುವರ ಬಳಿ ಕೃಷಿ ತೋಟದ ಖರ್ಚಿಗೆ ಹಣ ನೀಡಿದರೆ ನಿಮಗೆ ಹೆಚ್ಚುವರಿ ಹಣ ಸೇರಿಸಿ ನೀಡುವುದಾಗಿ ನಂಬಿಸಿ ವಂಚಿಸಿರುವ ಘಟನೆ ನಡೆದಿದೆ.
ತೆರೆಸಾ ಮೆಂಡೊನ್ಸಾ ಅವರು ಸಂತೋಷ್ ವಾತನ್ನು ನಂಬಿ ಒಟ್ಟು 4.5 ಲಕ್ಷ ರೂ. ನೀಡಿದ್ದರು. ಅಲ್ಲದೆ ಸಂತೋಷ್ ಮಹಿಳೆಯ ಚಿನ್ನದ ಸರವನ್ನೂ ಅಡವಿಟ್ಟು ಹಣ ಪಡೆದುಕೊಂಡಿದ್ದ. ಹಣ ವಾಪಸ್ ಕೇಳಿದಾಗ ಕೊಡದೆ ಮೋಸ ಮಾಡಿದ್ದಾನೆಂದು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.