ಬೆಳಗಾವಿ:ಇಂದಿನ ಆಧುನಿಕ ದಿನಮಾನದಲ್ಲಿ ಮಹಿಳೆಯರು ಕೇವಲ ಒಂದೇ ಕ್ಷೇತ್ರಕ್ಕೆ ಮೀಸಲಾಗಿರದೆ, ಅವರ ಪರಿಶ್ರಮ ಹಾಗೂ ಪ್ರತಿಭೆಯಿಂದ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕ್ರತಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ರಂಗದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಖ್ಯಾತ ವೈದ್ಯೆ ಡಾ. ಸೌಭಾಗ್ಯ ಭಟ್ ಅಭಿಪ್ರಾಯ ಪಟ್ಟರು.
ಇತ್ತೀಚೆಗೆ ರಾಮತೀರ್ಥ ನಗರದ ಸಮುದಾಯ ಭವನದಲ್ಲಿ ಸುರೇಶ ಯಾದವ್ ಪೌಂಡೇಶನ್ ಹಾಗೂ ರಾಮತೀರ್ಥ ನಗರದ ಮಹಿಳಾ ರಹವಾಸಿಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ "ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ವಿಶ್ವ ಮಹಿಳೆಯರ ದಿನವನ್ನು ಪ್ರತಿ ವರ್ಷ ಮಾರ್ಚ್ 9 ರಂದು ವಿಶ್ವದಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.
ಕುಟುಂಬದ ಆಧಾರ ಸ್ಥಂಭವಾಗಿರುವ ಮಹಿಳೆಯರು, ಜಂಕ್ ಪುಡ್ ಗಳನ್ನು ತ್ಯಜಿಸಿ, ಪೋಷಕಾಂಶಯುಕ್ತ ಹಣ್ಣು, ತರಕಾರಿ, ಮೊಳಕೆಕಾಳಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಡುಗೆಯಲ್ಲಿ ಬಳಸಿ ತಮ್ಮ ಆರೋಗ್ಯದ ಕುರಿತು ಜಾಗೃತಿ ವಹಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸುರೇಶ ಯಾದವ ಪೌoಡೇಶನ್ ಕಾರ್ಯದರ್ಶಿ ಪೂರ್ಣಿಮಾ ಯಾದವ, ಅನ್ವರ್ಬಾನು ಪಠಾಣ್ಅ ನಸೂಯಾ ಹಿರೇಮಠ, ಛಾಯ ಬೆಳ್ಳಿ, ಅಕ್ಕಮಹಾದೇವಿ ಪಾಟೀಲ, ಸುಮಂಗಳಾ ಪಾಟೀಲ, ಸಂಗೀತಾ ಗುಣಕಿ, ರೂಪಾ ಪಾವಟೆ, ಕುಮುದಾ ಲಂಕೇಪ್ಪನವರ ಶಾರದಾ ಸೇರಿದಂತೆ ರಾಮತೀರ್ಥ ನಗರದ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.