ಜಿಲ್ಲೆ

ಜಿ-20 ಸಭೆಗೆ ಆಹ್ವಾನ ಇಲ್ಲದೆ ಹೇಗೆ ಹೋಗಲಿ : ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ದೇವೆಗೌಡರು ಮತ್ತು ಪ್ರಧಾನಿ ಮೋದಿ ಅವರ  ಕೈ ಕೈ ಹಿಡಿದುಕೊಂಡು ಓಡಾಡುವುದು ನೋಡಿದ್ದೇನೆ. ಈಗ ಒಂದಾಗುತ್ತಿದ್ದಾರೆ ಅಷ್ಟೇ

ವಿಜಯ ವಾಣಿ ಸುದ್ದಿಜಾಲ ಕಲಬುರಗಿ
ಸಾಮರಸ್ಯ ಸಾರುವ ಜಿ -20 ಸಭೆಗೆ ಮತ್ತ ಔತಣಕೂಟಕ್ಕೆ ಆಹ್ವಾನ ಇಲ್ಲದೆ ಹೇಗೆ ಹೋಗಲಿ ಎಂದು ರಾಜ್ಯಸಭೆಯ ವಿಪಕ್ಷ ನಾಯಕರಾದ  ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ  ಪತ್ರಕರ್ತರ ಜತೆಗೆ ಮಾತನಾಡಿ, ಯಾಕೆ ಆಹ್ಚಾನ ನೀಡಿಲ್ಲ ಎಂಬುದು ಅವರಿಗೆ ಕೇಳಬೇಕು.
ದೇಶದಲ್ಲಿ ಮತ್ತು  ಪ್ರಪಂಚದಲ್ಲಿ ಹಲವು ಗೊಂದಲ ಇವೆ ಹೀಗಾಗಿ ಗದ್ದಲ ಇಲ್ಲದೆ ಸಾಮರಸ್ಯದಿಂದ ಇರುವುದು ಒಳ್ಳೆಯದು ಎಂದರು.

ರಾಜ್ಯದಲ್ಲಿ ಬಿಜೆಪಿ ಜೆ ಡಿ ಎಸ್ ಇಬ್ಬರು ಒಂದಾಗಿದ್ದಾರೆ ಅಂತ ಪೇಪರ್ ನಲ್ಲಿ ಓದಿದ್ದೇನೆ. ಮಾಜಿ ಪ್ರಧಾನಿ ದೇವೆಗೌಡರು ಮತ್ತು ಪ್ರಧಾನಿ ನರೇಂದ್ರ  ಮೋದಿ ಅವರ  ಕೈ ಕೈ ಹಿಡಿದುಕೊಂಡಿರೋದು ನೋಡಿದ್ದೇನೆ.ಅವರಿಬ್ಬರು ಒಂದಾಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಎಷ್ಟು ಸೀಟ್ ಅವರು ಕೇಳುತ್ತಾರೆ ಇವರು ಎಷ್ಟು ಕೊಡುತ್ತಾರೆ ಅನ್ನೋದು ಇನ್ನೂ ಕ್ಲಿಯರ್ ಆಗಿಲ್ಲ.ಆದರೆ, ನಮ್ಮನ್ನು  ಯಾರು ಹತ್ತಿಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

ದೇಶದಲ್ಲಿ 28 ಪಾರ್ಟಿಗಳು ಒಂದಾಗಿ ಚುನಾವಣೆ ಎದುರಿಸುವುದಕ್ಕೆ ಮುಂದಾಗಿದ್ದೆವೆ. ನಾವು ಶೇ.60 ರಷ್ಟು ಮತಗಳನ್ನು ಪಡೆಯಬೇಕು ಅಂತಾ ಲೆಕ್ಕಾಚಾರ ಇದೆ. ಇಂಡಿಯಾದ ನಾಲ್ಕನೇ ಮೀಟಿಂಗ್ ಕೂಡ ಮಾಡುತ್ತಿದ್ದೇವೆ. ನಾವೆಲ್ಲರು ಒಂದಾಗಿ ಬಿಜೆಪಿ ಹಾಗೂ‌ ಕೋಮುವಾದಿ ಶಕ್ತಿಗಳ  ವಿರುದ್ದ ಮಾಡಲು ಮುಂದಾಗಿದ್ದೆವೆ ಎಂದು ತಿಳಿಸಿದರು.

ಜೆಡಿಎಸ್ ಐಡಿಲಾಜಿ ಬಗ್ಗೆ  ಮಾತನಾಡಲ್ಲ

ಜೆ ಡಿ ಎಸ್ ಐಡಿಯಾಲಜಿ ಬಲು ಮಾಡಿದರೆ ಅದರ ಬಗ್ಗೆ  ನಾನು ಕಮೆಂಟ್ ಮಾಡೋದಿಲ್ಲ ಎಂದು ಎಐಸಿಸಿ ಅದ್ಯಕ್ಷ ಖರ್ಗೆ ಹೇಳಿದರು.
ಜೆ ಡಿ ಎಸ್ ಮೊದಲಿನಿಂದಲೂ ಸೆಕ್ಯೂಲರ್ ಅಂತಾ ಹೇಳುತ್ತಿದ್ದರು ಅಲ್ವಾ ? ನಾನು ರಾಜಕೀಯದಲ್ಲಿ ಧರ್ಮ ತರೋದಿಲ್ಲ ಎಂದರು.

ಧರ್ಮದ ಬಗ್ಗೆ ಸಮಯ ಬಂದಾಗ ಡಿಬೇಟ್
ಈಗ ರಾಜಕೀಯ ಹಾದಿಯಲ್ಲಿ ನಾವು ಒಂದಾಗಿ ಪೈಟ್ ಮಾಡುತ್ತಿದ್ದೇವೆ. ಧರ್ಮದ ವಿಚಾರ ಬಂದಾಗ  ಆ ಸಮಯ ಬಂದಾಗ ಡಿಬೇಟ್ ಮಾಡೋಣ ಯಾವುದು ಸರಿ ಯಾವುದು ತಪ್ಪು ಎಂದು ಚರ್ಚೆ ಮಾಡೋಣ ಎನ್ನುವ ಮೂಲಕ ಡಿಎಂಕೆ ಸಚಿವ ಉದಯನಿಧಿ ಸನಾತನ ಧರ್ಮದ ಬಗ್ಗೆ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದರು. ಬಸವಣ್ಣ ಸರಿನೋ ಅಂಬೇಡ್ಕರ್ ಸರಿನೋ ಅನ್ನೋದರ ಬಗ್ಗೆ  ಸಮಯ ಬಂದಾಗ ಚರ್ಚೆ ಮಾಡೋಣ ಎಂದು ಖರ್ಗೆ ತಿಳಿಸಿದರು.