ತೆಲಸಂಗ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪ್ರಾಚಾರ್ಯ ಶಿವಾನಂದ ಹಾಲೊಳ್ಳಿ, ಡಾ.ಶಾಹಿದಾ ಮಕಾಂದಾರ, ಡಾ.ಹನುಮಂತರಾಯ ಹಾರಿವಾಳ, ಡಾ.ಜೋತಿ.ಕೆ. ಇತರರಿದ್ದರು. 
ಜಿಲ್ಲೆ

ಕಾಡುಗಳಿಲ್ಲದ ಪ್ರಕೃತಿ ಸ್ಮಶಾನಕ್ಕಿಂತ ಭೀಕರ

ಪ್ರಶಾಂತ ಹೂಗಾರ

ತೆಲಸಂಗ: ಕಾಡುಗಳಿಲ್ಲದ ಪರಿಸರ ಸ್ಮಶಾನಕ್ಕಿಂತ ಭೀಕರ. ಹಾಗಾಗಿ ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಪ್ರಾಚಾರ್ಯ ಶಿವಾನಂದ ಹಾಲೊಳ್ಳಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಜೀವ ಸಂಕುಲ ಪರಿಸರವನ್ನು ಅವಲಂಬಿಸಿದೆ. ಮಾನವನ ದುರಾಸೆಯಿಂದ ಗಾಳಿ, ನೀರು, ಮಣ್ಣು ಸೇರಿ ಪರಿಸರದ ಪ್ರತಿ ಅಂಶ ಕಲುಷಿತಗೊಂಡಿದೆ. ಎಲ್ಲರಿಗೂ ಪರಿಸರ ಕುರಿತು ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದರು.

ಡಾ.ಶಾಹಿದಾ ಮಕಾಂದಾರ, ಡಾ.ಹನುಮಂತರಾಯ ಹಾರಿವಾಳ, ಡಾ.ಜೋತಿ.ಕೆ., ಡಾ.ಬಸಯ್ಯ ಮಠಪತಿ, ವಿಶ್ವನಾಥ ಪಾಟೀಲ, ಕೆ.ಎಸ್.ಬಿಜ್ಜರಗಿ ಇತರರಿದ್ದರು.